Loading Events

೧೬೧೧೧೯೧೧ ೧೫೧೦೧೯೮೭ ೧೯೩೦-೪೦ ರ ದಶಕದಲ್ಲಿ ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ವೆಂಕಟರಾಮ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಬಿ.ವಿ. ಸುಬ್ಬರಾವ್, ತಾಯಿ ಗೌರಮ್ಮ, ರಂಗಭೂಮಿ ಹಾಗೂ ಪತ್ರಿಕಾರಂಗದಲ್ಲಿ ಬೆಳೆದ ಆಸಕ್ತಿ. ೧೪ನೇ ವಯಸ್ಸಿನಲ್ಲೆ ಶಶಿರೇಖಾ ಪರಿಣಯದ ಕೃಷ್ಣನಾಗಿ ರಂಗಪ್ರವೇಶ. ಕೈಲಾಸಂ ನಾಟಕಗಳಿಂದ ಪ್ರೇರಿತರಾಗಿ ಸೇರಿದ್ದು ಕೈಲಾಸಂ ಗರಡಿ. ಹಲವಾರು ನಾಟಕಗಳಲ್ಲಿ ಪಾತ್ರಧಾರಿ. ಕೈಲಾಸಂರ ಬಹಳಷ್ಟು ನಾಟಕಗಳ ಲಿಪಿಕಾರ. ಇವರ ನಿರ್ದೇಶನದ ಬಹದ್ದೂರ್ ಗಂಡು ೧೫೦ ಪ್ರದರ್ಶನ ಕಂಡ ದಾಖಲೆ. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸರಕಾರದ ರಂಗಭೂಮಿ ಸಲಹಾ ಸಮಿತಿ ಅಧ್ಯಕ್ಷರಾಗಿ, ಸಂಗೀತ ನಾಟಕ ಅಕಾಡಮಿಯ ಹಲವಾರು ಕಾರ್ಯಕ್ರಮಗಳ ರೂವಾರಿಯಾಗಿ, ಪಶ್ಚಿಮ ಬಂಗಾಲದ ಸಂಗೀತ ನಾಟಕ ಅಕಾಡಮಿಯ ಸಮೀಕ್ಷಕರಾಗಿ, ರಾಜ್ಯದ ನಾಟಕ ಪಠ್ಯಪುಸ್ತಕ ಸಮಿತಿ, ಆಂಧ್ರಪ್ರದೇಶ ಸರಕಾರದ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ಪರಿಷತ್ತಿನ ಸ್ವರ್ಣ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷರಾಗಿ, ಸಲ್ಲಿಸಿದ ಸೇವೆ. ರಂಗಭೂಮಿಯ ಬಗ್ಗೆ ಅರಿವು ಮೂಡಿಸಲು ಸ್ಥಾಪಿಸಿದ್ದು ಛಾಯಾ ನಾಟಕ ಅಕಾಡಮಿ, ಸರಕಾರದ ಮಾನ್ಯತೆ ಪಡೆದು ಛಾಯಾ ಆರ್ಟಿಸ್ಟ್ ಅಂಡ್ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಮೂಲಕ ರಾಜ್ಯ ಶಿಕ್ಷಕರಿಗೆ ನೀಡಿದ ರಂಗತರಬೇತಿ. ಲೇಖಕರಾಗಿ ಬಂಜೆ ಮಕ್ಕಳಿವರೇನಮ್ಮ, ಅಲೆಗಳು, ಒಳಸಂಚು-ನಾಟಕಗಳು ; ೨೭ ಘಂಟೆಗಳಲ್ಲಿ-ಕಿರು ಕಾದಂಬರಿ ; ಅಂತರಗಂಗೆ-ಕಥಾಸಂಕಲನ ಮುಂತಾದ ಕೃತಿಗಳ ಕರ್ತೃ. ಇವರ ಹೆಸರಿನಲ್ಲಿ ಚಾಮರಾಜಪೇಟೆಯ ಬಿ.ಎಸ್. ವೆಂಕಟರಾಮ್ ಕಲಾ ಭವನದಲ್ಲಿ ಕಲೆಯ ವಿವಿಧ ಕ್ಷೇತ್ರದ ಗಣ್ಯರಿಗೆ ಅವರು ಹುಟ್ಟಿದ ದಿನದಂದು ಪ್ರತಿವರ್ಷ ಸನ್ಮಾನ ಕಾರ್ಯಕ್ರಮ.   ಇದೇ ದಿನ ಹುಟ್ಟಿದ ಕಲಾವಿದರು ಯಲ್ಲಪ್ಪ ಡಿ. – ೧೯೩೭ ವಿಜಯ ಮಾರ್ತಾಂಡ – ೧೯೪೮ ಅಯ್ಯನಗೌಡ ಪಾಟೀಲ – ೧೯೪೯ ನರೇಂದ್ರಬಾಬು ಆರ್. – ೧೯೬೩