Loading Events
  • This event has passed.

..೧೮೯೯ ..೧೯೮೬ ಚಿತ್ರದುರ್ಗ ಮದಕರಿ ನಾಯಕನ ವಂಶಕ್ಕೆ ಸೇರಿದ ದೇವೇಂದ್ರಪ್ಪನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ. ತಂದೆ ಬಿ.ಎಸ್.ರಾಮಯ್ಯ ಸಂಗೀತ ಮತ್ತು ಭರತ ನಾಟ್ಯ ಪ್ರವೀಣರು. ತಾಯಿ ತುಳಸಮ್ಮ. ತಂದೆಯಿಂದಲೇ ಪಡೆದ ಸಂಗೀತ ಶಿಕ್ಷಣ. ಲೋಯರ್‌ ಸೆಕೆಂಡರಿ ತೇರ್ಗಡೆಯಾದ ನಂತರ ಉದ್ಯೋಗಕ್ಕೆ ಸೇರಿದ್ದು ಶಾಲಾ ಶಿಕ್ಷಕರಾಗಿ. ಮನೆಯಲ್ಲಿದ್ದ ದಿಲ್‌ರುಬಾ, ಸಿತಾರ್‌, ಪಿಟೀಲು, ಗೋಟುವಾದ್ಯ, ಜಲತರಂಗ್ ಮುಂತಾದುವುಗಳನ್ನು ತಾವೇ ಕಲಿತು ನುಡಿಸುವುದರಲ್ಲಿ ಪಡೆದ ಪ್ರಾವೀಣ್ಯತೆ. ಬಿಡಾರಂ ಕೃಷ್ಣಪ್ಪನವರ ಗ್ರಾಮಫೋನ್ ರೆಕಾರ್ಡ್‌ ಕೇಳಿ ಸಂಗೀತ ಕಲಿಯಲು ಬಂದುದು ಮೈಸೂರಿಗೆ. ಅನುಕೂಲವಾಗದೆ ಬಿಡಾರಂ ಕೃಷ್ಣಪ್ಪನವರ ಫೋಟೋ ಪಡೆದು ಏಕಲವ್ಯನಂತೆ ಮಾಡಿದ ಸಂಗೀತ ಸಾಧನೆ. ಎಡೆಬಿಡದ ಸಾಧನೆಯಿಂದ ದೇಹಾಲಸ್ಯ-ನ್ಯುಮೋನಿಯೋ ರೋಗಕ್ಕೆ ತುತ್ತು. ನಂತರ ಸುಧಾರಿಸಿದ ಕಂಠಶ್ರೀ. ಶ್ರೀಮಂತ ವಜ್ರದ ವ್ಯಾಪಾರಿಯೊಬ್ಬರ ಸ್ನೇಹದಿಂದ, ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಡೆಸಿಕೊಟ್ಟ ಜಲತರಂಗ್ ಕಾರ್ಯಕ್ರಮ. ಗುರುಗಳು ಯಾರೆಂದಾಗ ಬಿಡಾರಂ ಕೃಷ್ಣಪ್ಪನವರೆಂದು ಒಪ್ಪಿಕೊಂಡಾಗ, ಆಶ್ಚರ್ಯ ಭರಿತರಾದ ಬಿಡಾರಂ ರವರು ಶಿಷ್ಯನನ್ನಾಗಿ ಸ್ವೀಕಾರ. ಶಿಷ್ಯನಿಗೆ ಎರೆದ ಸಂಗೀತದ ಧಾರೆ. ನವರಾತ್ರಿ ಸಂದರ್ಭದಲ್ಲಿ ದೇವೇಂದ್ರಪ್ಪನವರು ಅರಮನೆಯಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ೧೯೫೩ರಲ್ಲಿ ಸಾಂಸ್ಕೃತಿಕ ನಿಯೋಗದೊಡನೆ ಚೀನಾ ಪ್ರವಾಸ. ಸಂಗೀತದಿಂದ ಕರ್ನಾಟಕಕ್ಕೆ ತಂದ ಖ್ಯಾತಿ. ಅ.ನ.ಕೃ.ರವರು ಅವರ ಶೈಲಿಗೆ ಸಿಂಹ ವೈಖರಿ ಎಂದರೆ ಪ್ರೊ. ಸಾಂಬಮೂರ್ತಿಯವರು ಗಂಡು ಹಾಡುಗಾರಿಕೆ ಎಂಬ ಪ್ರಶಂಸೆ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಮಹಾರಾಜರ ವರ್ಧಂತಿ ಸಂದರ್ಭದಲ್ಲಿ ಗಾನ ವಿಶಾರದ, ಮದರಾಸಿನ ಸಂಗೀತ ಸಭೆಯಲ್ಲಿ ಗಾಯಕ ರತ್ನ, ಹೈದರಾಬಾದಿನಲ್ಲಿ ರಾಗಾಲಾಪನ ಚತುರ, ಬಳ್ಳಾರಿಯಲ್ಲಿ ಗಾನ ಕೇಸರಿ, ರಂಭಾಪುರಿ ಜಗದ್ಗುರುಗಳಿಂದ ಗಾಯಕ ಸಾರ್ವಭೌಮ ಬಿರುದುಗಳು. ಕೇಂದ್ರ ಸಂಗೀತನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯ ಸರಕಾರದ ಪ್ರಶಸ್ತಿಯಲ್ಲದೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಮುಂತಾದುವು.   ಇದೇದಿನಹುಟ್ಟಿದಕಲಾವಿದರು: ಕೃಷ್ಣಗಿರಿ ಕೃಷ್ಣರಾಯರು – ೧೮೯೩ ಗುರುದತ್ ಕಾಮತ್.ಎನ್ – ೧೯೪೪ ಮೈಕೊ ಕಿಟ್ಟಿ – ೧೯೪೫ ಕೃಷ್ಣಮೂರ್ತಿ ಹೊಳ್ಳ – ೧೯೪೯.

* * *