Loading Events

೯-೧೦-೧೯೨೦ ೧೬-೩-೨೦೦೨ ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಚತುರ್ಭಾಷಾ ಕೋವಿದ, ಕವಿ ಮುದ್ದಣನವರು ಹುಟ್ಟಿದ್ದು ಗುಲಬರ್ಗಾದ ಸುರಪುರದ ರಂಗಂಪೇಟ್‌ನಲ್ಲಿ. ತಂದೆ ಪ್ರಭುರಾವ್, ತಾಯಿ ಸೂಗಮ್ಮ. ಪ್ರಾರಂಭಿಕ ಶಿಕ್ಷಣ ಸುರಪುರ. ೧೯೪೮ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ. ಜೊತೆಗೆ FC GP-IMA ಇಂಡಿಯಾ, MCCP-ದೆಹಲಿ, FCCP ಹೊಸದೆಹಲಿ, FUWA-ಮದರಾಸು ಮುಂತಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಿಂದ ಪಡೆದ ಗೌರವ ಸದಸ್ಯತ್ವಗಳು. ಉದ್ಯೋಗಕ್ಕಾಗಿ ಸೇರಿದ್ದು ಹೈದರಾಬಾದ್ ಮತ್ತು ಕರ್ನಾಟಕದಲ್ಲಿ ಸಹಾಯಕ ಶಸ್ತ್ರ ಚಿಕಿತ್ಸಾ ವೈದ್ಯರಾಗಿ ಸೇವೆ ಪ್ರಾರಂಭ. ಜಿಲ್ಲಾ ಶಸ್ತ್ರ ಚಿಕಿತ್ಸಾ ವೈದ್ಯರಾಗಿ, ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ೧೯೯೫ರಲ್ಲಿ ನಿವೃತ್ತಿ. ನಿವೃತ್ತಿಯ ನಂತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಡೆದ ಡಿ.ಲಿಟ್ ಪದವಿ. ಚಿಕ್ಕಂದಿನಿಂದಲೂ ಸಾಹಿತ್ಯದತ್ತ ಒಲವು ಬೆಳೆಸಿಕೊಂಡು ಓದಿದ, ಹಲವಾರು ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ‘ಸತ್ಯಾನಂದ’ ಕಾವ್ಯನಾಮದಿಂದ ಹಲವಾರು ಕೃತಿರಚನೆ. ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಕೃತಿ ರಚನೆ. ಉರ್ದುವಿನಲ್ಲಿ-ಇರ್ಫಾನ್-ಇ-ಸುಕುನ್, ಐನ್-ಇ-ಇರ್ಫಾನ್, ಹಸನ್-ಇ-ಇರ್ಫಾನ್, ಮಂಝಾರ್-ಬ-ಮಂಝಾರ್, ಟಜಲಿಯಟ್. ಹಿಂದಿಯಲ್ಲಿ ರಸಗಂಗಾ, ನೀಲಕಮಲ್, ಚೈತನ್ಯರೇಖಾ. ಇಂಗ್ಲಿಷ್‌ನಲ್ಲಿ-ಬ್ಲೂ ಐಸ್, ಹೊರೈಝನ್, ಗ್ಲಿಂಪ್ಸಸ್ ಆಫ್ ವರ್ಲ್ಡ್ ಲಿಟರೇಚರ್ ಭಾಗ ೧. ೨, ಗ್ಲಿಂಪ್ಸಸ್ ಆಫ್ ವರ್ಲ್ಡ್ ಫಿಲಾಸಫಿ. ಮೂರು ಭಾಷೆಗಳಲ್ಲೂ ಕಾವ್ಯ ಕೃತಿಗಳು. ಕನ್ನಡದಲ್ಲಿ-ಪ್ರಭುದರ್ಶನ, ಮಧುರವೇದನೆ, ತ್ರಿಶೂಲ, ಹನಿಗಳು, ಕಿರಣವೀಣೆ, ಉರ್ದು ಗೀತೆ, ಮೀರಾ (ನಾಟಕ), ಸತ್ಯಾನಂದರ ಸಮಗ್ರ ಕಾವ್ಯ, ಪಂಚಾನನ (ಸಮಗ್ರ ನಾಟಕ), ಸತ್ಯಾನಂದರ ಸಮಗ್ರಗದ್ಯ. ಇತರರೊಡನೆ-ಶ್ರದ್ಧಾಂಜಲಿ, ಸಂತಾನ ಸಂಕೋಲೆ, ಕಾವ್ಯಶ್ರೀ ಮುಂತಾದ ಹಲವಾರು ಕಾವ್ಯಕೃತಿ ರಚನೆ. ‘ಕಾವ್ಯದರ್ಶನಂ’ ನಾಲ್ಕು ಭಾಷೆಯಲ್ಲೂ ಪ್ರಕಟಿತ. ಹಲವಾರು ಸಂಘ ಸಂಸ್ಥೆಗಳೊಡನಾಟ. PEN ಮುಂಬೈ, ಆಥರ್ಸ್‌ ಗಿಲ್ಡ್ ಇಂಡಿಯಾ, ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾ, ಪೊಯಟ್ಸ್ ಇಂಟರ್‌ನ್ಯಾಷನಲ್ ಆರ್ಗನೈಸೇಷನ್, ಯುನೈಟೆಡ್ ರೈಟರ್ ಅಸೋಸಿಯೇಷನ್, ಅಂಜುಮಾನ್-ಇ-ತಾರೀಖ್ ಮುಂತಾದ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ. ಸಂದ ಪ್ರಶಸ್ತಿಗಳು-ಕೇಂದ್ರ ಸರಕಾರದ ವಿಕಾಸರತನ್ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾತ್ಮಗಾಂ ಪ್ರಶಸ್ತಿ, ಸಾಹಿತ್ಯ ಮಾರ್ತಾಂಡ ಪ್ರಶಸ್ತಿ, ಚತುರ್ಭಾಷಾ ಚತುರ ಪ್ರಶಸ್ತಿ, ‘ಸತ್ಯಾನಂದರ ಸಮಗ್ರ ಕಾವ್ಯ’ ಕೃತಿಗೆ ಕುವೆಂಪು ಪ್ರಶಸ್ತಿ. ಹಲವಾರು ಪ್ರತಿಷ್ಠಿತ ಪ್ರಕಟಣೆಯಾದ WHO IS WHOಗಳಲ್ಲಿ ಪರಿಚಯ ಸೇರ‍್ಪಡೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಂಬುಜಾ ತ.ರಾ.ಸು. – ೧೯೩೦ ಭಾಗ್ಯಜಯ ಸುದರ್ಶನ – ೧೯೪೮