Loading Events

೬.೧೧.೧೯೪೬ ಸಂಗೀತ ಕ್ಷೇತ್ರದಲ್ಲಿ ರುದ್ರಪಟ್ಟಣ ಸಹೋದರರೆಂದೇ ಖ್ಯಾತರಾಗಿರುವವರಲ್ಲಿ ಒಬ್ಬರಾದ ಆರ್.ಎನ್. ತಾರಾನಾಥನ್‌ರವರು ಹುಟ್ಟಿದ್ದು ಹಾಸನದಲ್ಲಿ. ತಂದೆ ಸಂಗೀತ ವಿದ್ವಾಂಸರಾದ ಆರ್.ಕೆ. ನಾರಾಯಣಸ್ವಾಮಿ, ತಾಯಿ ಸಾವಿತ್ರಮ್ಮ, ಓದಿದ್ದು ಎಂಎಸ್ಸಿ., ಪಿಎಚ್.ಡಿ. ಕಾಲೇಜಿನ ಉಪನ್ಯಾಸಕರಾಗಿ ಕೆಲಕಾಲ, ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿಯಾಗಿ ಸೇರ್ಪಡೆ, ಸಂಶೋಧನೆಗಾಗಿ ನಾಲ್ಕಾರು ಬಾರಿ ಜರ್ಮನಿ ಪ್ರವಾಸ, ಪಿಎಚ್.ಡಿ., ಎಂಫಿಲ್‌ಗಳ ಮಾರ್ಗದರ್ಶಿ. ತಂದೆಯಿಂದಲೇ ಕಲಿತ ಸಂಗೀತದ ಪಾಠ. ಸಂಗೀತಗಾರರ ಮನೆತನ. ಅಣ್ಣ ತ್ಯಾಗರಾಜನ್ ಎಂ.ಎಸ್ಸಿ ಪದವೀಧರರು. ಒಂಬತ್ತನೆ ವಯಸ್ಸಿನಿಂದಲೇ ಕಚೇರಿ ಮಾಡಲು ಪ್ರಾರಂಭ. ದೇಶವಿದೇಶಗಳಲ್ಲಿ ನಡೆಸಿಕೊಟ್ಟ ನೂರಾರು ಸಂಗೀತ ಕಚೇರಿಗಳು. ಆಕಾಶವಾಣಿಯ ಶ್ರೇಷ್ಠ ದರ್ಜೆಯ ಗಾಯಕರು. ರಾಷ್ಟ್ರೀಯ ಜಾಲದಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳು ಪ್ರಸಾರ. ಕೇರಳ, ತಮಿಳುನಾಡು ರಾಜ್ಯದ ಪ್ರತಿಷ್ಠಿತ ಸಭೆ, ಸಂಘ ಸಂಸ್ಥೆಗಳು, ಸಾರ್ಕ ಸಮ್ಮೇಳನ, ಅರಮನೆಯ ದರ್ಬಾರ್ ಹಾಲ್, ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಊತಕ್ಯಾಡ್ ವೆಂಕಟಸುಬ್ಬ ಅಯ್ಯರ್, ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರಚನೆಗಳನ್ನು ಅಭ್ಯಸಿಸಿ ನೀಡಿದ ಪ್ರದರ್ಶನ ಕಾರ್ಯಕ್ರಮ, ವಿದೇಶ ಪ್ರವಾಸ, ಹಲವಾರು ಸಿಡಿ, ಕ್ಯಾಸೆಟ್‌ಗಳ ಬಿಡುಗಡೆ. ಸಂಗೀತ ನಿಯತಕಾಲಿಕೆಗಳಿಗೆ ಬರೆದ ಲೇಖನಗಳು. ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ, ಮದರಾಸು ಮ್ಯೂಸಿಕ್ ಅಕಾಡಮಿಯಿಂದ ಬೆಸ್ಟ್ ಮ್ಯೂಸಿಷಿಯನ್, ಉಡುಪಿಯ ಸಂಗೀತೋತ್ಸವದಲ್ಲಿ ಗಾನಸುಧಾಕರ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು. ಯುವ ಪ್ರತಿಭೆಗಳಿಗೆ ನೀಡುತ್ತಿರುವ ಸಂಗೀತ ಶಿಕ್ಷಣ.   ಇದೇ ದಿನ ಹುಟ್ಟಿದ ಕಲಾವಿದ ಎ.ಸಿ.ಎಚ್. ಆಚಾರ್ಯ – ೧೯೨೫