Loading Events

೧೮೧೦೧೮೫೭ ಅರಸರ ಕಾಲದ ಮೈಸೂರಿನ ಸಾಂಸ್ಕೃತಿಕ ಭೂಪಟದಲ್ಲಿ ಅಪೂರ್ವ ತಾರೆಯೆನಿಸಿದ್ದ ಲಕ್ಷ್ಮೀದೇವಮ್ಮ(ಜಟ್ಟಿ ತಾಯಮ್ಮ) ಹುಟ್ಟಿದ್ದು ಮೈಸೂರು. ತಂದೆ ಅರಮನೆಯ ಜಟ್ಟಿಯಾಗಿದ್ದ ದಾಸಾ ಜಟ್ಟಪ್ಪ. ಆರನೆಯ ವಯಸ್ಸಿನಿಂದಲೇ ಸಂಗೀತ ಹಾಗೂ ನೃತ್ಯದಲ್ಲಿ ಆಸಕ್ತಿ. ತಂದೆ ಹಾಗೂ ಉಪಾದ್ರು ಎಂಬ ಗುರುವಿನಿಂದ ಭಕ್ತಿಗೀತೆಗಳ ಶಿಕ್ಷಣ. ವ್ಯಾಕರಣ ಪಂ.ಎಂ.ಸುಬ್ರಮಣ್ಯ ಶಾಸ್ತ್ರಿಗಳಿಂದ ಸಂಸ್ಕೃತ ಪಾಠ. ಮೈಸೂರಿನ ವಾಗ್ಗೇಯಕಾರರಾಗಿದ್ದ ವಾಸುದೇವಚಾರ್ಯರಲ್ಲೂ ಕೆಲಕಾಲ ಸಂಗೀತ ಅಭ್ಯಾಸ. ಇವರ ನೃತ್ಯವನ್ನು ವೀಕ್ಷಿಸಿದ ಚಾಮರಾಜೇಂದ್ರ ಒಡೆಯರಿಂದ ಆಸ್ಥಾನ ವಿದುಷಿಯಾಗಿ ನೇಮಕ. ೧೯೦೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ವಿವಾಹ ಸಂದರ್ಭದಲ್ಲಿ ನೃತ್ಯಪ್ರದರ್ಶನ ನೀಡಿ ಪಡೆದ ಪ್ರಶಂಸೆ. ಉತ್ತಮ ಕಲಾವಿದೆಯಷ್ಟೇ ಅಲ್ಲದೇ ಉತ್ತಮ ಗುರುವೂ ಹೌದು. ಗುರುಕುಲ ಪದ್ಧತಿಯಲ್ಲಿ ಶಿಷ್ಯರಿಗೆ ನೀಡಿದ ಶಿಕ್ಷಣ. ನೃತ್ಯ ಕಲಿಕೆಯ ಜೊತೆಗೆ ಹಾಡಲು ಬಾರದವರು ನೃತ್ಯ ಕಲಿಯುವುದು ನಿಷ್ಪ್ರಯೋಜಕವೆಂದು ತಿಳಿದಿದ್ದ ಕಾಲ. ರಾಗ, ತಾಳ, ಲಯ, ಶ್ರುತಿ  ಕಲಿತ ನಂತರವೇ ನೃತ್ಯಾಭ್ಯಾಸ. ನೀಲಮ್ಮ, ಜಯಮ್ಮ, ಉದಯಶಂಕರ್‌, ರಾಮಗೋಪಾಲ, ಮೂಗೂರು ಸುಂದರಮ್ಮ, ಕೆ.ವೆಂಕಟಲಕ್ಷ್ಮಮ್ಮ ಅವರುಗಳಲ್ಲದೆ ತಮಿಳು ನಾಡಿನಿಂದಲೂ ಬಂದು ಕಲಿತ ಬಹುದೊಡ್ಡ ಶಿಷ್ಯವರ್ಗ. ಕರ್ನಾಟಕ ಸಂಗೀತದಷ್ಟೇ ಪ್ರೀತಿಯಿಂದ ಕಲಿತ ಹಿಂದೂಸ್ತಾನಿ ಸಂಗೀತ – ಖ್ಯಾತ ಹಿಂದೂಸ್ಥಾನಿ ಗಾಯಕ ಗೊಹರ್‌ಜಾನ್‌ರಿಂದ ಕಲಿತ ಠುಮ್ರಿ, ಘಜಲ್‌ಗಳು. ಮಹಾರಾಜಾ ಕಾಲೇಜಿನ ಸಮಾರಂಭವೊಂದರಲ್ಲಿ ಇವರ ಆಕರ್ಷಕ ನೃತ್ಯ ಪ್ರದರ್ಶನ ಕಂಡ ಡಾ. ಎಸ್‌.ರಾಧಾಕೃಷ್ಣನ್‌ರವರಿಂದ ನಾಟ್ಯ ಸರಸ್ವತಿ ಬಿರುದು. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವ.   ಇದೇದಿನಹುಟ್ಟಿದಕಲಾವಿದೆ ಶಕುಂತಲಾ ಗೋಖಲೆ – ೧೯೨೩

* * *