Loading Events
  • This event has passed.

೧೭.೦೮.೧೯೫೨ ಪ್ರಖ್ಯಾತ ಕಲಾ ವಿಮರ್ಶಕ, ಚಿತ್ರ ಕಲಾವಿದ, ಬರಹಗಾರರಾದ ಕೃಷ್ಣಶೆಟ್ಟಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ತಂದೆ ಸಿ.ಪಿ. ಸುಬ್ಬಯ್ಯಶೆಟ್ಟಿ, ತಾಯಿ ಸರೋಜಮ್ಮ. ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್ ಅಂಡ್‌ಕ್ರಾಫ್ಟ್ ನಿಂದ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮ. ಕೇಂದ್ರ ಲಲಿತ ಕಲಾ ಅಕಾಡಮಿಯ ಸ್ಕಾಲರ್ ಷಿಪ್‌ನಿಂದ ಗಾರಿ ಸ್ಟುಡಿಯೋದಲ್ಲಿ ಗ್ರಾಫಿಕ್‌ ಕಲೆಯಲ್ಲಿ ಪಡೆದ ಪರಿಣತಿ. ಕನ್ನಡ ಎಂ.ಎ, ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಉಪನ್ಯಾಸಕರಾಗಿ ಕ್ಲಾರಿಟಾನ್‌ ಜಾಹೀರಾತು ಕಂಪನಿಯಲ್ಲಿ ಕಲಾ ನಿರ್ದೇಶಕರಾಗಿ, ವಿನ್ಯಾಸ ಜಾಹೀರಾತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿರ್ವಹಿಸಿದ ಜವಾಬ್ದಾರಿಯುತ ಹುದ್ದೆಗಳು. ಫೆಸ್ಟಿವಲ್‌ ಆಫ್‌ ಇಂಡಿಯ – ಅಮೆರಿಕಾದ ಕಲೆ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಲಾಸ್‌ಏಂಜಲೀಸ್‌, ಟೆಕ್ಸಾಸ್‌, ಪೆನ್ಸಿಲ್ವೇನಿಯಾ; ಮ್ಯಾಂಚೆಸ್ಟರ್ – ಇಂಗ್ಲೆಂಡ್‌; ಪೊಲೆಂಡ್‌, ಫಿಲಿಫೈನ್ಸ್‌ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಾಂಬೆ, ಗೋವಾ, ಉದಯಪುರ, ಲಕ್ನೋ ಮುಂತಾದೆಡೆ ಪ್ರದರ್ಶನಗಳು. ಬೆಂಗಳೂರಿನ ದೂರದರ್ಶನಕ್ಕಾಗಿ ಚಿತ್ರಾಂತರಂಗ, ಮರೀಚಿಕೆ, ನವಿಲುಗರಿ, ಸುಪ್ರಭಾತವಾಹಿನಿಗಾಗಿ ಜೀವನ; ಶೈಕ್ಷಣಿಕ ಕಾರ್ಯಕ್ರಮಗಳು, ಕನ್ನಡ ಸಂಸ್ಕೃತಿ ಇಲಾಖೆಗಾಗಿ ೪ ಚಿಕ್ಕ ಚಲನಚಿತ್ರಗಳು, ರಸಪ್ರಶ್ನೆ ಕಾರ್ಯಕ್ರಮಗಳು ಮುಂತಾದವುಗಳ ನಿರ್ಮಾಣ, ನಿರ್ದೇಶನ. ೨೦೦೪ ರಲ್ಲಿ ಅಮೆರಿಕದಿಂದ ಅಂತಾರಾಷ್ಟ್ರೀಯ ವ್ಯಕ್ತಿ, ದೆಹಲಿಯ ರಾಷ್ಟ್ರೀಯ ರತ್ನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ ಸಹ್ಯಾದ್ರಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಮುಂತಾದ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ಚಿಂತನಪಲ್ಲಿ ವೆಂಕಟರಾವ್‌ – ೧೮೭೪ ಆರ್.ಎನ್. ಜಯಗೋಪಾಲ್‌ – ೧೯೩೫ ಸಂಜಯಸೂರಿ – ೧೯೪೭ ಕಲ್ಪನಾರಾಣಿ – ೧೯೫೭ ಜಯಾ – ೧೯೬೪

* * *