Loading Events

೦೪.೧೦.೧೯೫೯ ಸುಗಮ ಸಂಗೀತ ಮತ್ತು ಚಲನಚಿತ್ರಗಳ ಸುಮಧುರ ಗಾಯಕಿ ಚಂದ್ರಿಕಾ ಗುರುರಾಜ್‌ರವರು ಹುಟ್ಟಿದ್ದು ತುಮಕೂರು. ತಂದೆ ಕೆ.ಆರ್‌. ರಂಗರಾವ್‌, ತಾಯಿ ಲಲಿತಮ್ಮ. ಕಲಾವಿದರ ಮನೆತನ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ೩ವರ್ಷದ ಮಗುವಾಗಿದ್ದಾಗಿನಿಂದಲೇ ಲತಾಮಂಗೇಶ್ಕರ್ ಹಾಡುಗಾರಿಕೆಗೆ ಒಲಿದ ಮನಸ್ಸು. ತುಮಕೂರಿನ ಶಕುಂತಲಮ್ಮನವರಿಂದ ಪ್ರಾರಂಭಿಕ ಸಂಗೀತ ಶಾಸ್ತ್ರೀಯ ಪಾಠ. ಶ್ಯಾಮಲಾಭಾವೆ ಮತ್ತು ಸುರೇಂದ್ರ ಸಾ ನಾಕೋಡ್‌ರವರ ಬಳಿ ಕಲಿತದ್ದು ಹಿಂದೂಸ್ತಾನಿ ಸಂಗೀತ. ಶಾಸ್ತ್ರೀಯ ಸಂಗೀತದಲ್ಲಿ ಪಡೆದ ಸೀನಿಯರ್‌ಗ್ರೇಡ್‌. ಆಕಾಶವಾಣಿ ಎ ಶ್ರೇಣಿ ಗಾಯಕಿಯಾಗಿ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಕರ್ನಾಟಕದಾದ್ಯಂತ ಸಾಂಸ್ಕೃತಿಕ ಉತ್ಸವಗಳಲ್ಲಿ, ಸಂಗೀತೋತ್ಸವಗಳಲ್ಲಿ ಭಾಗಿ. ಜೇಸುದಾಸ್ ಜೊತೆ ಹಾಡಿದ ಗರಿಮೆ. ೫೦೦ಕ್ಕೂ ಮಿಕ್ಕು ಸುಗಮ ಸಂಗೀತ ಕಚೇರಿಗಳು. ಭಕ್ತಿಗೀತೆ, ಭಾವಗೀತೆ, ಜನಪದಗೀತೆಗಳ ೮೫೦ ಕ್ಕೂ ಹೆಚ್ಚು ಧ್ವನಿಸುರುಳಿಗಳ ಬಿಡುಗಡೆ. ಶ್ರೀರಾಘವೇಂದ್ರ ಸ್ವಾಮಿಗಳನ್ನು ಕುರಿತು ಹಾಡಿದ ಭಜನ ಚಂದ್ರಿಕಾ, ಆಡುಬಾರಮ್ಮ ಮಹಾಲಕ್ಷ್ಮೀ, ಹರಿನಾಮ ಮಾಲ ಹೆಸರು ತಂದುಕೊಟ್ಟ ಧ್ವನಿ ಸುರುಳಿಗಳು. ೧೯೯೦ ರಲ್ಲಿ ಶಂಕರ್‌ನಾಗ್‌ರಿಂದ ಪರಿಚಯಿಸಲ್ಪಟ್ಟು ಚಲನಚಿತ್ರಕ್ಕೆ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ. ಸುಮಾರು ೮೦ಕ್ಕೂ ಹೆಚ್ಚು ಚಿತ್ರಗಳಿಗೆ ನೀಡಿದ ಹಿನ್ನೆಲೆಗಾಯನ. ಊರ್ವಶಿ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಅತ್ಯುತ್ತಮ ಗಾಯಕಿ ಪ್ರಶಸ್ತಿ, ಚಿತ್ರ ರಸಿಕರ ಸಂಘದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ೨೦೦೬ರಲ್ಲಿ ನಡೆದ ಬಾಲ್ಟಿಮೋರ್‌ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡಿಗರ ಮನಗೆದ್ದ ಗಾಯಕಿ.   ಇದೇದಿನಹುಟ್ಟಿದಕಲಾವಿದರು ಉಳ್ಳಾಲ್‌ ಮೋಹನ್‌ರಾವ್‌- ೧೯೩೩ ಬ್ರಹ್ಮಾಚಾರ್‌. ಟಿ – ೧೯೫೨

* * *