Loading Events
  • This event has passed.

೫-೧-೧೮೬೯ ವೆಂಕಟೇಶ ತಿರಕೋ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ. ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ. ಉತ್ತಮ ಅಂಕಗಳಿಕೆ. ಶಿಕ್ಷಕರಾಗಲು ತೀರ‍್ಮಾನ. ಧಾರವಾಡದ ಟ್ರೈನಿಂಗ್ ಕಾಲೇಜು ಸೇರ‍್ಪಡೆ. ಶಿಕ್ಷಣ ಮುಗಿಸಿ ಶಿರಗುಪ್ಪಿಯಲ್ಲಿ ಪ್ರಾಥಮಿಕ ಶಾಲಾ ಮಾಸ್ತರಿಕೆ. ಧಾರವಾಡದ ವಿದ್ಯಾವರ್ಧಕ ಸಂಘದವರು ಕನ್ನಡ ಭಾಷೆಗೆ ಪ್ರೋತ್ಸಾಹಿಸಲು ಇನಾಮು ಕೊಡಲು ಘೋಷಣೆ. ಗಳಗನಾಥರ ಮೊದಲ ಕಾದಂಬರಿ ಪದ್ಮನಯನೆಗೆ ಬಹುಮಾನ. ಸಂಘದಲ್ಲಿದ್ದ ರಾ.ಹ. ದೇಶಪಾಂಡೆಯವರಿಂದ ಕಾದಂಬರಿಗೆ ಮುಕ್ತ ಕಂಠದ ಹೊಗಳಿಕೆ. ೧೮೯೮ರಿಂದ ೧೯೪೨ರವರೆಗೆ ಅವ್ಯಾಹತ ಬರವಣಿಗೆ. ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ ಮುಂತಾದ ಕಾದಂಬರಿಗಳು. ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. ಅಧ್ಯಾಪಕರಾದ ಇವರಿಗೆ ತೋರಿದ ತಾರತಮ್ಯ ಭಾವ, ಕೆಲಸಕ್ಕೆ ರಾಜೀನಾಮೆ. ೧೯೦೭ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭ. ಚಂದಾದಾರರನ್ನು ಹುಡುಕುವಲ್ಲಿ ತೊಂದರೆ. ಆರ್ಥಿಕ ಮುಗ್ಗಟ್ಟು . ಹಾವೇರಿಗೆ ಪ್ರಯಾಣ. ಸದ್ಗುರು ಪತ್ರಿಕೆ ಪ್ರಕಟಣೆ (೧೯೧೯) ಪ್ರಾರಂಭ. ಟಿ.ಎಸ್. ವೆಂಕಣ್ಣಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಡಿ.ವಿ.ಜಿ. ಎ.ಆರ್.ಕೃಷ್ಣಶಾಸ್ತಿ, ದೇವುಡು, ಬಿ.ಎಂ.ಶ್ರೀ. ಮುಂತಾದವರ ಆರ್ಥಿಕ ಹಸ್ತ. ಧೃತಿಗೆಡದೆ ಕನ್ನಡಕ್ಕೆ ದುಡಿತ. ಕಾದಂಬರಿ ಪ್ರಕಟಣೆ. ಸಂಚಾರಿ ಪುಸ್ತಕ ಮಾರಾಟಗಾರರಾಗಿ ಮೈಸೂರು ಪ್ರಾಂತ್ಯದಲ್ಲೆಲ್ಲಾ ಅಲೆತ. ‘ಮಾಧವ ಕರುಣಾವಿಲಾಸ’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿ ಬಹುಮಾನ. ಇಪ್ಪತ್ತನಾಲ್ಕು ಕಾದಂಬರಿಗಳು, ಒಂಬತ್ತು ಪೌರಾಣಿಕ ಕಥೆಗಳು, ಮೂರು ಸತ್ಪುರುಷರ ಚರಿತ್ರೆಗಳು, ಎಂಟು ನಿಬಂಧ-ಪ್ರಬಂಧ ಪ್ರಕಟಣೆ. ಆರ್ಥಿಕ ಮುಗ್ಗಟ್ಟಿನಿಂದ ಸಾಲದ ಹೊರೆ. ತೀರಿಸಲು ಬರಿಗಾಲಲ್ಲಿ ಅಲೆದಾಟ. ೭೪ರ ವಯಸ್ಸಿನಲ್ಲಿ ಕ್ಯಾನ್ಸರಿಗೆ ಬಲಿಯಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನ ೨೨.೪.೧೯೪೨ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಕೆ. ಇಂದಿರಾ – ೧೯೧೭-೧೫.೩.೧೯೯೪ ಬಿ.ವಿ. ಹಂಪನ ಗೌಡ – ೧೯೩೨ ಸಿದ್ಧರಾಜಐವಾರ್ – ೧೯೫೫