Loading Events

೧೯೨೪ ಶಿವಪಾರ್ವತಿ ನೃತ್ಯದ, ನೃತ್ಯ ದಂಪತಿ ಪಟುಗಳೆಂದೇ ಪ್ರಖ್ಯಾತರಾಗಿದ್ದವರಲ್ಲಿ ರಾಜಗೋಪಾಲ್‌ರವರು ಹುಟ್ಟಿದ್ದು ಉಡುಪಿ. ತಂದೆ ಶ್ರೀನಿವಾಸ ಹೆಬ್ಬಾರ್ ಪ್ರಾಧ್ಯಾಪಕರು, ರಾಜಗೋಪಾಲ್ ಆಕರ್ಷಿತರಾದದ್ದು ನೃತ್ಯ ಕ್ಷೇತ್ರದ ಕಡೆಗೆ, ಎಂ.ಆರ್. ನಾಗಭೂಷಣ್‌ರಲ್ಲಿ ೧೬ನೇ ವಯಸ್ಸಿನಿಂದಲೇ ನೃತ್ಯಾಭ್ಯಾಸ, ಮೈಸೂರಿಗೆ ತೆರಳಿದ ನಂತರ ನಾಟ್ಯ ಪ್ರವೀಣೆ ಸುಂದರಮ್ಮ ಮತ್ತು ಜಟ್ಟಿ ತಾಯಮ್ಮನವರಲ್ಲಿ ಮುಂದುವರೆದ ಶಿಕ್ಷಣ. ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಜಟ್ಟಪ್ಪನವರ ನಾಟಕ ಕಂಪನಿಗಳಲ್ಲಿ, ವಹಿಸುತ್ತಿದ್ದ ಸ್ತ್ರಿ ಪಾತ್ರಗಳು, ರಾಘವೇಂದ್ರಸ್ವಾಮಿಗಳ ಮೇಲೆ ಹಲವಾರು ಕೃತಿಗಳ ರಚನೆ, ತಮಿಳಿನ ಪ್ರಸಿದ್ಧ ಕೃತಿ ‘ತಾಯೇ ಯಶೋದೆಯ’ ಕನ್ನಡಾನುವಾದ. ೧೯೪೮ರಲ್ಲಿ ನೃತ್ಯ ಕಲಾಮಂದಿರ ಸ್ಥಾಪಿಸಿ ನೂರಾರು ಶಿಷ್ಯರಿಗೆ ನೀಡಿದ ನೃತ್ಯ ಶಿಕ್ಷಣ. ನೃತ್ಯಗಾರ್ತಿ ಪತ್ನಿಯೊಡನೆ ರೂಪಿಸಿದ ಹಲವಾರು ಕಾರ್ಯಕ್ರಮಗಳು. ಶಿವಪಾರ್ವತಿ, ಬೆಸ್ತರ ನೃತ್ಯ ಪ್ರಖ್ಯಾತಿ ಪಡೆದ ನೃತ್ಯ ಕಾರ್ಯಕ್ರಮಗಳು. ಮೈಸೂರು ಅರಮನೆಯ ಬ್ಯಾಂಡ್ ಸೆಟ್ ತಂಡದಲ್ಲೂ ನಡೆಸಿಕೊಟ್ಟ ಕೆಲ ಕಾರ್ಯಕ್ರಮಗಳು. ತಿಲೋತ್ತಮೆ ಚಲನ ಚಿತ್ರಕ್ಕಾಗಿ ಮಾಡಿದ ನೃತ್ಯ ನಿರ್ದೇಶನದಿಂದ ದಂಪತಿಗಳು ಪಡೆದ ಖ್ಯಾತಿ. ಪತ್ನಿ ಜಯಂತಿಯವರು ನೃತ್ಯವಷ್ಟೇ ಅಲ್ಲದೆ ವೀಣೆ, ಪಿಟೀಲು ವಾದನ ಪರಿಣತೆ. ಶಿಷ್ಯರಿಗೆ ನೀಡುತ್ತಿರುವ ವಾದನ ಸಂಗೀತ ತರಬೇತಿ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಮೈಸೂರಿನ ಭಾರತೀಯ ನೃತ್ಯಕಲಾ ಪರಿಷತ್‌ನಿಂದ ನೃತ್ಯ ಕಲಾ ಶಿಲ್ಪ, ಮಂಡ್ಯದ ಶಾಂತಲಾ ನೃತ್ಯ ಕಲಾಶಾಲೆಯಿಂದ ನಾಟ್ಯಕಲಾ ರತ್ನ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು : ಪಿ.ಆರ್. ಭಾಗವತ್ – ೧೯೧೨ ರಾಜಶೇಖರ್ ಎಚ್. – ೧೯೪೯ ಮಾಲಾಬಾಯಿ ಎಂ. ಬೀಳಗಿ – ೧೯೫೨ ಆಕಾರಾಣಿ – ೧೯೭೨

* * *