Loading Events
  • This event has passed.

೧೨..೧೯೨೨ ೨೭.೧೯೬  ನಾಟಕ ರಂಗದ ಆತ್ಮೀಯರಲ್ಲಿ ’ಐನೋರು’ ಎಂದೇ ಪ್ರಸಿದ್ಧರಾಗಿದ್ದ ರಂಗಭೂಮಿಯ ನಟ ವೀರಭದ್ರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಮಾರನಾಯ್ಕನಹಳ್ಳಿ. ಬಾಲ್ಯದಿಂದಲೇ, ಹಳ್ಳಿಯಲ್ಲಿ ನಡೆಯುತ್ತಿದ್ದ ಬಯಲು ನಾಟಕಗಳಿಂದ ಆಕರ್ಷಿತರಾಗಿ ಇಡೀ ರಾತ್ರಿ ಕುಳಿತು ವೀಕ್ಷಿಸುತ್ತಿದ್ದ ನಾಟಕಗಳು. ಅಭಿನಯ ಕಲೆ ಎಂದರೆ ಪಂಚಪ್ರಾಣ. ದೊಡ್ಡ ನಟನಾಗಬೇಕು. ಭೀಮ, ಘಟೋತ್ಕಜರಂತಹ ಪಾತ್ರ ಮಾಡಬೇಕೆಂಬ ಹಿರಿದಾದ ಆಸೆ. ಆದರೆ ನಾಟಕ ನಂಬಿ ಹೊಟ್ಟೆ ತುಂಬದೆಂದು ಆರಿಸಿಕೊಂಡಿದ್ದು ಶಿಕ್ಷಣ ಕ್ಷೇತ್ರ. ತುಮಕೂರಿನ ನಾರ್ಮಲ್ ಸ್ಕೂಲಿನಿಂದ ಪಡೆದ ವಿ.ಟಿ.ಸಿ ತರಬೇತಿ, ಚಿತ್ರದುರ್ಗದಲ್ಲಿ ಕೈಗೊಂಡ ಉಪಾಧ್ಯಾಯರ ವೃತ್ತಿ. ಆರುವರ್ಷಗಳ ಕಾಲ ವಿದ್ಯಾರ್ಥಿಗಳೊಡನೆ ಬೆಳೆಸಿಕೊಂಡ ಮಧುರಬಾಂಧವ್ಯ. ಒಳಗೇ ಚಿಗುರುತ್ತಿದ್ದ ಕಲಾಸೇವೆಯ ಬಗ್ಗೆ ಆಸೆ. ಅಚಾನಕವಾಗಿ ಬಂದ ಭಾಗ್ಯ. ಶಾಲೆಯ ನಾಟಕೋತ್ಸವದಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಸಿಕ್ಕ ನಾಯಕನ ಪಾತ್ರ. ನೀಡಿದ ಸಮರ್ಥ ಅಭಿನಯ. ಪ್ರೇಕ್ಷಕವರ್ಗದಿಂದ ದೊರೆತ ಪ್ರಶಂಸೆ. ನಾಟಕಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಫಿಲಂಸ್‌ನ ಚಿತ್ರ ಹಂಚಿಕೆಯ ಸಂಸ್ಥೆಯ ನಿರ್ದೇಶಕರೂ, ವಾಣಿಜ್ಯೋದ್ಯಮಿಗಳೂ ಆದ ಮುರುಗಪ್ಪನವರಿಂದ ಪ್ರಶಂಸೆ ದೊರೆತುದಲ್ಲದೆ ಗುಬ್ಬಿ ಕಂಪನಿ ಸೇರಲು ತೋರಿದ ನೆರವು. ಗುಬ್ಬಿ ಕಂಪನಿಯ ಚನ್ನ ಬಸವೇಶ್ವರ ಸ್ವಾಮಿ ನಾಟಕ ಸಂಸ್ಥೆಯಲ್ಲಿ ದೊರೆತ ಸಣ್ಣಪುಟ್ಟ ಪಾತ್ರಗಳು. ಗಳಿಸಿದ ಖ್ಯಾತಿಯಿಂದ ದೊರೆತ ಪ್ರಮುಖ ಪಾತ್ರ. ಅಶೋಕ, ಕಂಸ(ಕೃಷ್ಣಲೀಲಾ), ಕರ್ಣ, ದುರ‍್ಯೋಧನ, ಭೀಮ, ಕಾನಿಫ್ (ರಾಜಾಗೋಪಿಚಂದ್) ರಾಮ, ಶಂಕರ (ಕಾಲಚಕ್ರ), ಶುಭು (ಅಡ್ಡದಾರಿ), ಭೀಮ (ಕೃಷ್ಣಗಾರಾಡಿ) ಅರ್ಜುನ, ಬಲಿಚಕ್ರವರ್ತಿ (ದಶವತಾರ) ಮುಂತಾದ ಪಾತ್ರನಿರ್ವಹಣೆಯಿಂದ ಗಳಿಸಿದ ಖ್ಯಾತಿ. ಗುಬ್ಬಿ ಕಂಪನಿಯಲ್ಲದೆ ಸುಬ್ಬಯ್ಯ ನಾಯ್ಡುರವರ ’ಶ್ರೀಸಾಹಿತ್ಯಸಾಮಾಜ್ಯ ನಾಟಕ ಮಂಡಲಿ’ಯಲ್ಲಿಯೂ ಹಲವಾರು ವರ್ಷ ನಟನಾಗಿ ವಹಿಸಿದ ಪಾತ್ರಗಳು. ಈ ಕಂಪನಿಯಲ್ಲಿ ಭಕ್ತಿ ಅಂಬರೀಷ, ದೂರ್ವಾಸ ಮತ್ತು ಅಂಬರೀಷನಾಗಿ, ಭೂ ಕೈಲಾಸ ನಾಟಕದಲ್ಲಿ ಈಶ್ವರನಾಗಿ, ರಾಜಭಕ್ತಿ ನಾಟಕದಲ್ಲಿ ದುರ್ಜಯನಾಗಿ, ಅಭಿನಯಿಸಿ ಗಳಿಸಿದ ಜನಮನ್ನಣೆ. ಪಂಢರಿಬಾಯಿ, ರಾಜಕುಮಾರ್‌ ರವರೊಡನೆಯೂ ಹಲವಾರು ನಾಟಕಗಳಲ್ಲಿ ಪಡೆದ ಪಾತ್ರವರ್ಗ.   ಇದೇದಿನಹುಟ್ಟಿದಕಲಾವಿದರು: ಜಿ.ಆರ್‌.ದಾಸಪ್ಪ-೧೯೧೩ ಮುನಿವೆಂಕಟಪ್ಪ-೧೯೨೬ ಬಾಲಕೃಷ್ಣ ವೈ.ಕೆ-೧೯೩೨ ಸಿದ್ರಾಮಪ್ಪ ಪಿ.ಪಾಟೀಲ-೧೯೬೦ ವಾಸುದೇವ್.ಎನ್.-೧೯೫೯

* * *