Loading Events

೭.೧೧.೧೮೯೫ ತ್ಯಾಗರಾಜರ ಭವ್ಯ ಪರಂಪರೆಗೆ ಸೇರಿದ, ಸಂಗೀತದ ಪ್ರಭಾವ ಶಾಲಿ ಪರಿಸರದಲ್ಲಿ ಬೆಳೆದ ಚೆನ್ನಕೇಶವಯ್ಯನವರು ಹುಟ್ಟಿದ್ದು ಕೃಷ್ಣರಾಜಪೇಟೆ ತಾಲ್ಲೂಕಿನ ಮಂದಗೆರೆ ಸಮೀಪದ ನಾಟನಹಳ್ಳಿ. ತಂದೆ ಕೇಶವಯ್ಯ, ದೇವರನಾಮಗಳನ್ನು ಹಾಡುವುದರಲ್ಲಿ ಪ್ರಸಿದ್ಧರು, ತಾಯಿ ಲಕ್ಷ್ಮೀದೇವಮ್ಮ. ಆಸ್ಥಾನ ವಿದ್ವಾನ್ ವೀಣೆ ಶಿವರಾಮಯ್ಯನವರ ಬಳಿ ಸಂಗೀತ ಪಾಠ, ನಂತರ ವಾಸುದೇವಾಚಾರ್ಯರಲ್ಲಿ ಮುಂದುವರೆದ ಶಿಕ್ಷಣ. ಒಂದು ಕೃತಿಯನ್ನು ಒಮ್ಮೆ ಕೇಳಿದರೆ ಸಾಕು, ಸ್ವರ ಬದಲಾಗದೆ ಆ ಕೃತಿಯನ್ನು ಹಾಡುವ ಶಕ್ತಿ, ದೈವದತ್ತವಾಗಿ ಬಂದ ಕಲೆ. ಜಯಚಾಮರಾಜೇಂದ್ರ ಒಡೆಯರ ೯೪ ಕೃತಿಗಳನ್ನು ಸ್ವರಸಹಿತ ಸಿದ್ಧಪಡಿಸಿದ ಕೀರ್ತಿ. ಹರಿದಾಸರ ಕೀರ್ತನ ಸುಧಾಕರ ೩ ಸಂಪುಟಗಳ ಪ್ರಕಟಣೆ. ಕಚೇರಿ ಮಾಡಿದ್ದಕ್ಕಿಂತಲೂ ಶಾಸ್ತ್ರಾಧಿಕಾರ, ಸಂಪ್ರದಾಯ ಪಾಂಡಿತ್ಯ, ಸಂಗೀತ ಲಕ್ಷಣ, ಜ್ಞಾನ, ವರ್ಣ, ಕೃತಿ, ಪಲ್ಲವಿಗಳ ಸಂಗ್ರಹಕಾರರು, ರಾಗಾಲಾಪನ ಪದ್ಧತಿ, ತಾನಪಲ್ಲವಿ ಕೃತಿ ರಚನೆ. ಹಲವಾರು ಪತ್ರಿಕೆಗಳಿಗೆ ಸಂಗೀತದ ವಿಷಯದಲ್ಲಿ ಬರೆದ ಲೇಖನಗಳು. ವೀಣೆ ಸುಬ್ಬಣ್ಣನವರ ಜೀವನಚರಿತ್ರೆ, ಗೋವಿಂದ ದಾಸರ ಭಜನ ಪದ್ಧತಿ ಸಂಪಾದಿತ ಕೃತಿಗಳು. ವಿವಿಧ ರೇಡಿಯೋ ಕೇಂದ್ರಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮ. ತಿರುವಾಂಕೂರು, ತಿರುಚನಾಪಳ್ಳಿ, ಕೊಚ್ಚಿನ್, ಬರೋಡ, ಇಂದೂರ್, ಬೆಂಗಳೂರು, ಮೈಸೂರು ಸ್ಥಳಗಳಲ್ಲಿ ನೀಡಿದ ಕಚೇರಿಗಳು. ಟಿ. ಚೌಡಯ್ಯ ಪ್ರಶಸ್ತಿ, ಗಾಯನ ಸಮಾಜದಿಂದ ಪ್ರಶಸ್ತಿ, ತಿರುಮಕೂಡಲು ನರಸೀಪುರದಲ್ಲಿ ಸಂಗೀತ ವಿದ್ಯಾನಿಧಿ ಪ್ರಶಸ್ತಿ, ಮೈಸೂರಿನ ಸೀತಾರಾಮ ಮಂದಿರದ ಸಮ್ಮೇಳನಾಧ್ಯಕ್ಷತೆ – ಗಾನ ಕಲಾಸಿಂಧು ಬಿರುದು, ಸಂಗೀತ ಅಕಾಡಮಿ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಸೋಮಶೇಖರ ಸಾಲಿ – ೧೯೨೨ ತಿಪ್ಪಣ್ಣ ಸಾ ವೆಂಕೂಸಾ ಚವಾಣ್ – ೧೯೩೦ ಚಿದಾನಂದ ಗಣೇಶಗುಡಿ – ೧೯೫೪