Loading Events

೧೫.೧೧.೧೯೫೨ ಮೃದಂಗ ಹಾಗೂ ಘಟವಾದನ ನಿಪುಣ ದಯಾನಂದ ಮೋಹಿತೆಯವರು ಹುಟ್ಟಿದ್ದು ಬೆಂಗಳೂರು. ತಂದೆ ಹಿಂದೂಸ್ತಾನಿ ಗಾಯಕರಾದ ಎಂ.ಎನ್.ಎಂ. ರಾವ್, ತಾಯಿ ಲಕ್ಷ್ಮೀಬಾಯಿ, ಬಿ.ಕಾಂ. ಪದವೀಧರರು. ಏಳನೇ ವಯಸ್ಸಿನಿಂದಲೇ ಅಣ್ಣ ಎಂ. ವಾಸುದೇವರಾವ್ ಬಳಿ ಮೃದಂಗ ಹಾಗೂ ಘಟವಾದನ ಶಿಕ್ಷಣ. ಹಿರಿಯ ಸಂಗೀತಗಾರರಾದ ಡಾ. ಎಂ. ಬಾಲಮುರಳಿಕೃಷ್ಣ, ಆರ್.ಕೆ. ಶ್ರೀಕಂಠನ್, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಆರ್.ಕೆ. ಪದ್ಮನಾಭ, ಟಿ.ವಿ. ಶಂಕರನಾಯರ್, ಕದ್ರಿ ಗೋಪಾಲನಾಥ್, ಮ್ಯಾಂಡೊಲಿನ್ ಶ್ರೀನಿವಾಸ್ ಮುಂತಾದವರುಗಳಿಗೆ ನೀಡಿದ ಮೃದಂಗ, ಘಟವಾದನ ಸಹಕಾರ. ಬೆಂಗಳೂರಿನ ಗಾನಕಲಾ ಪರಿಷತ್, ಗಾಯನ ಸಮಾಜ, ಶ್ರೀಕೃಷ್ಣ ಗಾನಸಭಾ, ತ್ಯಾಗರಾಜ ಗಾನಸಭಾ, ರಾಜಾಜಿನಗರ ಸಂಗೀತಸಭಾ, ತಿರುಮಲೆ ತಿರುಪತಿ ದೇವಸ್ಥಾನ, ಅನ್ನಮಾಚಾರ್ಯ ಕಲಾಸಂಘಗಳಲ್ಲದೆ ಆಕಾಶವಾಣಿ ಬಿ.ಹೈ. ಕಲಾವಿದರಾಗಿ ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ಕಾರ್ಯಕ್ರಮ ಪ್ರಸಾರ. ಬೆಂಗಳೂರಿನ ಗಾಯನ ಸಮಾಜ ಸಮ್ಮೇಳನದಲ್ಲಿ ಉತ್ತಮ ಮೃದಂಗ ಪಕ್ಕವಾದ್ಯಗಾರ, ಚಾಮರಾಜಪೇಟೆ ರಾಮೋತ್ಸವ ಸಮಿತಿಯಿಂದ ಮೃದಂಗವಾದನ ಚತುರ, ಸೋಸಲೆ ಮಠಾಧೀಶರಿಂದ ಲಯವಾದನ ಚಾಣಕ್ಯ, ಚಿಂತಾಮಣಿ ಗಾಯನ ಸಮಾಜದಿಂದ ನಾದ ಚಿಂತಾಮಣಿ, ತ್ಯಾಗರಾಜ ಗಾನಸಭಾದಿಂದ ಲಯಕಲಾ ಭೂಷಣ, ಕೋರಮಂಗಲ ರಾಮೋತ್ಸವ ಸಮಿತಿಯಿಂದ ಲಯ ಕಲಾಶೇಖರ ಪ್ರಶಸ್ತಿಗಳು. ಹಲವಾರು ಬಾರಿ ಲಂಡನ್, ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಜರ್‌ಲ್ಯಾಂಡ್, ಹಾಲೆಂಡ್ ದೇಶಗಳ ಪ್ರವಾಸ. ಇತ್ತೀಚೆಗೆ ಸಿಯೊಲ್‌ನಲ್ಲಿ ನಡೆದ ೪೫ಕ್ಕೂ ಹೆಚ್ಚು ದೇಶದ ಸಂಗೀತ ವಿದ್ವಾಂಸರಿಂದ ದಿ ವರ್ಲ್ಡ್ ಮಾಸ್ಟರ್ಸ್ ಫೆಸ್ಟಿವಲ್ ಇನ್ ಆರ್ಟ್ಸ್ ಅಂಡ್ ಕಲ್ಚರ್‌ನಲ್ಲಿ ವೀಣಾ ವಿದ್ವಾಂಸರಾದ ಆರ್.ಕೆ. ಪ್ರಕಾಶ್, ಮೃದಂಗ ವಿದ್ವಾನ್ ಸಿ. ಚೆಲುವರಾಜು ಜೊತೆ ನಡೆಸಿಕೊಟ್ಟ ಕಾರ್ಯಕ್ರಮ. ಕೊರಿಯಾ ಸರಕಾರದಿಂದ World Master ಪ್ರಶಸ್ತಿ.   ಇದೇ ದಿನ ಹುಟ್ಟಿದ ಕಲಾವಿದರು ಎಂ.ವಿ. ಶ್ರೀನಿವಾಸ ಅಯ್ಯಂಗಾರ್ – ೧೯೨೬ ರವೀಂದ್ರ ಛಾವ್ಲಾ – ೧೯೩೨ ಫಕೀರಪ್ಪ ಆನಂದಪ್ಪ ಕಾಡೇಕರ – ೧೯೩೫