Loading Events

೧೨.೦೮.೧೯೨೪ ಕರ್ನಾಟಕ ಸಂಗೀತದ ದಿಗ್ಗಜರಲ್ಲೊಬ್ಬರಾದ ನರಸಿಂಹಾಚಾರ್ಯರು ಹುಟ್ಟಿದ್ದು ಮೈಸೂರು. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್, ತಾಯಿ ರಾಜಮ್ಮ. ಸಂಗೀತಾಸಕ್ತ ತಂದೆ, ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ತಾಯಿಯಿಂದ ಸಂಗೀತದ ಬಗ್ಗೆ ಬೆಳೆದ ಆಸಕ್ತಿ. ಅಕ್ಕ ಮತ್ತು ಭಾವನವರಾದ ಕೆ. ನರಸಿಂಹಾಚಾರ್ಯ ದಂಪತಿಗಳೇ ಸಂಗೀತದ ಮೊದಲ ಗುರುಗಳು. ಉನ್ನತ ಸಂಗೀತಾಭ್ಯಾಸಕ್ಕಾಗಿ ಸೇರಿದ್ದು ಅಣ್ಣಾಮಲೆ ವಿಶ್ವವಿದ್ಯಾಲಯ. ಸಭೇಷ್‌ ಅಯ್ಯರ್ ರವರಲ್ಲಿ ಸಂಗೀತ ಶಿಕ್ಷಣ. ಪರೀಕ್ಷಕರಾಗಿದ್ದವರು ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಟಿ.ವಿ. ಸುಬ್ಬರಾವ್‌ ಮತ್ತು ಟೈಗರ್ ವರದಾಚಾರ್ಯರು. ಪೂರ್ವ ಸಿದ್ಧತೆಯಿಲ್ಲದೆ ಸಾವೇರಿ ರಾಗವನ್ನು ಹಾಡಿ ತೋರಿಸಿ, ಪಡೆದ ಪ್ರಶಂಸೆ. ೧೯೪೧ ರಲ್ಲಿ ಆಕಾಶವಾಣಿಯಲ್ಲಿ ಹಾಡುವ ಅವಕಾಶ ಕಲಾವಿದರಾಗಿ ಆಯ್ಕೆ. ಮೈಸೂರಿನ ಮಹಾರಾಣಿ ಕಾಲೇಜು, ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ. ಇಂಡಿಯನ್‌ ಫಿಲಾಸಫಿಕಲ್‌ ಕಾಂಗ್ರೆಸ್‌ನ ಕಾನ್‌ಫರೆನ್ಸ್‌ನಲ್ಲಿ ಶ್ರೀಲಂಕಾ ಮತ್ತು ಶ್ರೀನಗರದಲ್ಲಿ ಹಾಡಿ ದೊರೆತ ಜನ ಮೆಚ್ಚುಗೆ. ಬೆಂಗಳೂರಿನ ಗಾಯನ ಸಮಾಜ, ಭಾರತೀಯ ವಿದ್ಯಾಭವನ, ಮೈಸೂರಿನ ಜಗನ್ಮೋಹನ ಅರಮನೆ, ಮದರಾಸಿನ ಮ್ಯೂಸಿಕ್‌ ಅಕಾಡಮಿ, ಕರ್ನಾಟಕದ ಗಾನ ಕಲಾ ಪರಿಷತ್‌ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮ. ಮೈಸೂರಿನಲ್ಲಿ ಗಾನ ಕಲಾಮಂದಿರ ಸ್ಥಾಪಿಸಿ ಶಿಷ್ಯರಿಗೆ ಶಿಕ್ಷಣ, ದಿಗ್ಗಜರಿಂದ ಸಂಗೀತ ಕಚೇರಿಗಳು. ಶ್ರೀನಗರದ ಸ್ವಾಮಿ ಶಿವಾನಂದ ಸರಸ್ವತಿಯವರಿಂದ ಸಂಗೀತ ಜ್ಯೋತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾ ತಿಲಕ ಬಿರುದುಗಳು. ರಾಜ್ಯ ಸಂಗೀತ ವಿದ್ವಾನ್‌, ರಾಜ್ಯೋತ್ಸವ ಪ್ರಶಸ್ತಿಗಳು, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ಗಾನ ಕಲಾ ಭೂಷಣ, ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಮೋಹನ ಕಲ್ಯಾಣಪುರ್ಕರ್ – ೧೯೧೩ ಮೀರ್ ಶೌಕತ್‌ ಅಲಿ – ೧೯೨೦ ಪಿ.ಆರ್. ತಿಪ್ಪೇಸ್ವಾಮಿ – ೧೯೨೨ ರಾಧಿಕಾರಾಜನಾರಾಯಣಿ – ೧೯೫೧ ಅಮರೇಶಗವಾಯಿ – ೧೯೫೨ ರಾಧಾದೇಸಾಯಿ – ೧೯೬೮

* * *