Loading Events
  • This event has passed.

೨೭..೧೯೧೪ ೨೩.೧೦.೨೦೦೬ ಪಿಟೀಲು ವಿದ್ವಾಂಸರಲ್ಲೇ ಅಗ್ರಗಣ್ಯರೆನಿಸಿದ್ದ ಕೇಶವ ಮೂರ್ತಿಗಳು ಹುಟ್ಟಿದ್ದು ಸಂಗೀತ ಕಾಶಿ ಎನಿಸಿದ್ದ ರುದ್ರಪಟ್ಟಣದಲ್ಲಿ. ತಂದೆ ರಾಮಸ್ವಾಮಯ್ಯ, ತಾಯಿ ಸುಬ್ಬಮ್ಮ. ಇವರ ತಾತ ವೆಂಕಟರಾಮಯ್ಯನವರು ಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಕಾರರು. ಸಂಗೀತದ ಮನೆತನ. ತಂದೆಯಿಂದಲೇ ಸಂಗೀತದ ಮೊದಲ ಪಾಠ. ೧೯೨೩ರ ವೇಳೆಗೆ. ಮೈಸೂರಿಗೆ ಬಂದು ಸಂಗೀತಾಭ್ಯಾಸ ಮಾಡಿದ್ದು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಅಭ್ಯಾಸ. ಚಿಕ್ಕರಾಮ ರಾಯರಲ್ಲಿ ಗಾಯನ ಕಲಿಕೆ. ಕಟ್ಟುನಿಟ್ಟಾದ ಪಾಠ, ಹಠದ ಸಾಧನೆ. ದಿನಕ್ಕೆ ಎಂಟು ಗಂಟೆಗಳ ಸತತ ಅಭ್ಯಾಸ. ಇಂದಿನಂತೆ ಕಲಿತ ಕೂಡಲೇ ವೇದಿಕೆ ಏರಬೇಕೆಂಬ ಧಾವಂತವಿರದ ಕಾಲ. ಟಿ. ಚೌಡಯ್ಯನವರಂತೆ ಪಿಟೀಲು ಅಭ್ಯಾಸ ಮಾಡಿದ್ದು ಏಳುತಂತಿಗಳಲ್ಲಿ. ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮರ್ಜಿಯಂತೆ ನಾಲ್ಕು ತಂತಿ ಇಲ್ಲವೇ ಏಳುತಂತಿ ಪಿಟೀಲಿನ ಸಾಥಿ. ೧೯೩೪ ರಲ್ಲಿ ಬೆಂಗಳೂರವಾಸ. ತೆಲುಗು, ಕನ್ನಡ, ತಮಿಳು, ಹಿಂದಿ, ಭಾಷೆಗಳಲ್ಲಿ ಪಡೆದ ಪ್ರಭುತ್ವ. ಗುರುಗಳ ಹೆಸರಿನಲ್ಲಿ ಗಾನವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾರಕ ಸಂಗೀತ ವಿದ್ಯಾಲಯ ಸ್ಥಾಪನೆ. ನೂರಾರು ವಿದ್ಯಾರ್ಥಿಗಳನ್ನು ಕಚೇರಿ ಮಾಡುವ ಮಟ್ಟಕ್ಕೆ ಮಾಡಿದ ಸಿದ್ಧತೆ. ಶಿಷ್ಯರಲ್ಲಿ ಅನೇಕರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಹೆಸರು. ಟಿ. ರುಕ್ಮಿಣಿ, ಆನೂರು ಎಸ್. ರಾಮಕೃಷ್ಣ ಮತ್ತು ಅಪರೂಪದ ಉದಯೋನ್ಮುಖ ಕಲಾವಿದರಾದ ನಿಖಿಲ್ ಜೋಶಿ. ಈತ ಗಿಟಾರ್‌ ವಾದನದಲ್ಲಿ ಕರ್ನಾಟಕ ಸಂಗೀತಾಭ್ಯಾಸ ಮಾಡಿ ಕಚೇರಿ ನೀಡಿ ವಿಸ್ಮಯ ಮೂಡಿಸಿದಾತ. ಮತ್ತೊಬ್ಬ ಶಿಷ್ಯೆ ಜ್ಯೋತ್ಸ್ನಾ ಶ್ರೀಕಾಂತ್‌. ಇವರಲ್ಲದೆ ಅಂಬಳೆ ಕೃಷ್ಣಮೂರ್ತಿ ನಳಿನಿಮೋಹನ್ ಮುಂತಾದವರ ಪಟ್ಟಿ ಬೆಳೆಯುತ್ತದೆ. ಹಲವಾರು ಸಂಗೀತ ಗ್ರಂಥಗಳ ರಚನೆ. ಬಾಲಶಿಕ್ಷಾ, ವಾಗ್ಗೇಯಕಾರರ ಕೃತಿಗಳು, ಭಾರತೀಯ ವಾಗ್ಗೇಯಕಾರರು, ರಾಗಲಕ್ಷಣ ಮತ್ತು ರಾಗಕೋಶ, ಲಕ್ಷ್ಯ-ಲಕ್ಷಣ ಪದ್ಧತಿ, ಸಂಗೀತ ಲಕ್ಷ್ಯ ವಿಜ್ಞಾನ, ಹಿಂದುಸ್ತಾನಿ ಸಂಗೀತ ರಾಗಕೋಶ, ಮೇಳರಾಗ ಮಾಲಿಕಾ ಮೊದಲಾದ ೨೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಗೌರವ ಪ್ರಶಸ್ತಿಗಳು. ಗಾನ ಸಾಹಿತ್ಯ ಶಿರೋಮಣಿ, ಸಂಗೀತ ವಿದ್ಯಾಸಾಗರ, ಸಂಗೀತಶಾಸ್ತ್ರ ಪ್ರವೀಣ, ಸಂಗೀತ ಕಲಾರತ್ನ, ಕರ್ನಾಟಕ ಕಲಾತಿಲಕ, ಲಯಕಲಾನಿಪುಣ, ಸಂಗೀತ ಕಲಾಪ್ರಪೂರ್ಣ, ಕನಕಪುರಂದರ ಪ್ರಶಸ್ತಿ, ವೀಣೆಶೇಷಣ್ಣ ಪ್ರಶಸ್ತಿಪುರಸ್ಕರತರು.   ಇದೇ ದಿನ ಹುಟ್ಟಿದ ಕಲಾವಿದ ಹಾರಾಡಿ ರಾಮಗಾಣಿಗ – ೧೯೦೨.

* * *