ಕಸ-ರಕ್ಕಸನನ್ನು ಮಣಿಸುವುದು ಹೇಗೆ?
ಸಂತೆಪೇಟೆಯಲ್ಲಿ ಹೀಗೇ ಒಮ್ಮೆ ಸುತ್ತಾಡಿ ಬನ್ನಿ. ಆ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ, ಶೂ ಅಂಗಡಿ, ಔಷಧಿ ಅಂಗಡಿ, ಆ ಥಳಥಳಿಸುವ ಮಾಲ್... ಅವುಗಳಲ್ಲಿ ಮಾರಾಟಕ್ಕಿಟ್ಟ ಎಲ್ಲವೂ ಮುಂದೆ ಒಂದಲ್ಲ ಒಂದು ದಿನ ತಿಪ್ಪೆ ರಾಶಿಗೆ ಹೋಗುತ್ತವೆ ಹೌದಾ? ಎಲ್ಲವೂ ಅಂದರೆ ಎಲ್ಲವೂ! ಆ ಅಂಗಡಿಯ ಶೋ ಕೇಸಿನ ಹಿಂದೆ ನಿಂತಿರುವ ಪಿಓಪಿ ಬೊಂಬೆ, ಅಲ್ಲಿನ ಗಾಜಿನ ಕನ್ನಡಿ, ಅದರ ಕೆಳಗೆ ಹಾಸಿರುವ ಕಾರ್ಪೆಟ್ ಎಲ್ಲವೂ ತಿಪ್ಪೆಗೆ ಹೋಗುವ ವಸ್ತುಗಳೇ ಹೌದು. ಯಾವುದೇ ರಾಷ್ಟ್ರದ [...]