ಮೋಹನಕುಮಾರ್ ಉಳ್ಳಾಲ
ಮಂಗಳೂರಿನ ಕೋಟೆಕಾರ್ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ. "ನಾಟ್ಯ ನಿಕೇತನ"ದ ಭೋದಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಪ್ರಸಾರ -ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದಲ್ಲೂ ವಿದೇಶಗಳಲ್ಲೂ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ [...]