ಡೇಟಾ ಸೈನ್ಸ್: ದತ್ತಾಂಶದ ಸುತ್ತ ಹೀಗೊಂದು ವಿಜ್ಞಾನ
ಡಾಟಾ ಮತ್ತು ಡಾಟಾ ವಿಜ್ಞಾನ ಎ೦ದರೇನು? : ಈ ದಿನಗಳಲ್ಲಿ ಮೊಬೈಲ್ ಫೋನ್ ಬಳಸುವ ಎಲ್ಲರಿಗೂ ಡಾಟಾ ಪ್ಯಾಕ್ ಬಗ್ಗೆ ಗೊತ್ತೇ ಇರುತ್ತದೆ. ಮೊಬೈಲ್ ಫೋನ್ ಮೂಲಕ ಅ೦ತರ್ಜಾಲ ಸ೦ಪರ್ಕ ಪಡೆಯಲು ತಮ್ಮ ಟಾಕ್ ಪ್ಲಾನ್ ಗೆ ಹೆಚ್ಚುವರಿಯಾಗಿ ಡಾಟಾ ಪ್ಲಾನ್ ಅನ್ನು ಅಳವಡಿಸಿಕೊ೦ಡಿರುತ್ತಾರೆ. ಹಾಗಾದರೆ ಏನಿದು ’ಡಾಟಾ’? ನೀವು ನಿಮ್ಮ ಮೊಬೈಲ್ ಫೋನ್ ನಲ್ಲಿ ಟೈಪಿಸುವ ಪಠ್ಯ(ಟೆಕ್ಸ್ಟ್), ನಿಮ್ಮ ಗೆಳೆಯರಿಗೆ ಕಳಿಸುವ ಚಿತ್ರ, ಧ್ವನಿ ಸ೦ದೇಶ(ಅಡಿಯೋ), ಹಾಡುಗಳು, ವಿಡಿಯೋ - ಹೀಗೆ ಎಲ್ಲವೂ ಡಾಟಾದ ಪರಿಧಿಗೆ [...]