ಪ್ರಜ್ಞೆ ಮತ್ತು ಪರಿಸರ : ಭಾಷಾ ಸಮಸ್ಯೆ : ಕೆಲವು ಟಿಪ್ಪಣಿಗಳು
ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ನಡುವೆ ಸಮಸ್ಯೆಯಲ್ಲಿ ಹೊಸದೇನೂ ಇಲ್ಲ. ಉದಾಹರಣೆಗೆ ಹಂಗೆರಿಯನ್ನು ತೆಗೆದುಕೊಳ್ಳಿ : ಕ್ರಿ.ಶ. ೧೮೪೮ರವರೆಗೆ ಹಂಗೆರಿಯಲ್ಲಿ ಸಾಮಾನ್ಯ ಜನರು, ರೈತರು ಬಳಸುತ್ತಿದ್ದ ಭಾಷೆ ಹಂಗೆರಿಯನ್, ಪಾರ್ಲಿಮೆಂಟಿನಲ್ಲಿ, ಶ್ರೀಮಂತರ ನಡುವೆ, ಜಮೀನ್ದಾರರ ಮನೆಗಳಲ್ಲಿ ಮಾತ್ರ ಲ್ಯಾಟಿನ್, ೧೮೪೮ರ ಕ್ರಾಂತಿಯಿಂದ ಇದು ಕೊನೆಗೊಂಡಿತು. ಪಟ್ಟಭದ್ರಹಿತದ ರಕ್ಷಣೆ ಮಾಡುತ್ತಿದ್ದ ಲ್ಯಾಟಿನ್ ಭಾಷೆಯನ್ನು ತೊರೆದು ಹಂಗೆರಿಯನ್ ಭಾಷೆಯನ್ನು ರೈತನ ನಿತ್ಯ ಜೀವನದಿಂದ ಹಿಡಿದು ಪಾರ್ಲಿಮೆಂಟಿನ ತನಕ ಉಪಯೋಗಿಸಬೇಕೆಂಬ ನಿರ್ಧಾರ ಈ ರಾಜಕೀಯ ಕ್ರಾಂತಿಯ ಮೂಲಕ ಆಯಿತು. ಪರಿಣಾಮ : [...]