ಬೈಜಿಕ ಭೌತವಿಜ್ಞಾನ
೫ ಬೈಜಿಕ ದ್ರವ್ಯಾಂತರಣ ರಸವಿಜ್ಞಾನದಲ್ಲಿ(ಆಲ್ಕೆಮಿ)ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವಾಗಿ ಪರಿವರ್ತಿಸುವ ಪ್ರಯತ್ನವು ಬಹಳ ಹಿಂದಿನಿಂದಲೂ ನಡೆಯುತ್ತಿದ್ದಿತು. ಕೀಳು ಲೋಹಗಳೆನಿಸಿಕೊಂಡಿದ್ದ ತಾಮ್ರ, ಸೀಸ ಇತ್ಯಾದಿಗಳನ್ನು ಹೇಗಾದರೂ ಮಾಡಿ ಚಿನ್ನವನ್ನಾಗಿ ಪರಿವರ್ತಿಸುವುದು ಅದರ ಮುಖ್ಯ ಉದ್ದೇಶವಾಗಿದ್ದಿತು. ಆ ಪ್ರಯತ್ನದಲ್ಲಿ ಯಾರೂ ಸಫಲರಾಗದಿದ್ದರೂ ಅವರುಗಳು ಉಪಯೋಗಿಸುತ್ತಿದ್ದ ಉಪಕರಣಗಳು ಮುಂದೆ ರಸಾಯನಶಾಸ್ತ್ರದಲ್ಲಿ ಬಹಳ ಸಹಾಯಕ್ಕೆ ಬಂದವು. ಈ ಪ್ರಯತ್ನಗಳ ವಿಫಲತೆಯಿಂದ ಒಂದು ಮೂಲಧಾತುವನ್ನು ಮತ್ತೊಂದು ಮೂಲಧಾತುವನ್ನಾಗಿ ಪರಿವರ್ತನೆಮಾಡಲು ಆಗುವುದಿಲ್ಲ ಎಂಬ ನಂಬಿಕೆ ನಿಧಾನವಾಗಿ ಬಂದು ಅಂತಹ ಮೂಲಧಾತುಗಳನ್ನು ಪರಮಾಣುಗಳು (ಆಟಮ್) ಎಂದೂ [...]