ತುಳುವ ಜಾನಪದ ಲೋಕ ಕೆಲವು ನೋಟಗಳು: ೨೩. ‘ಸಿರಿದರ್ಶನದ ಕಳ’ – ಕೆಲವು ಟಿಪ್ಪಣಿಗಳು
ಸಾಮೂಹಿಕ ದೈವಾವೇಶದ ವಿಶೇಷತೆಯುಳ್ಳ ಸಿರಿಜಾತ್ರೆಯು ಕವತ್ತಾರು, ನಂದಳಿಕೆ, ಹಿರಿಯಡ್ಕ, ಉರ್ಕಿತೋಟ, ಉರುಂಬಿದೊಟ್ಟು, ನಿಡಿಗಲ್ಲು, ಕುತ್ತೊಟ್ಟು, ಅತ್ರಿಜಾಲ್ ಮೊದಲಾದ ದೈವಸಂಕೀರ್ಣಗಳಲ್ಲಿ ‘ಪುಯಿಂತೆಲ್, ಮಾಯಿ, ಸುಗ್ಗಿ, ಪಗ್ಗು’ (ಫೆಬ್ರವರಿ, ಮಾರ್ಚ್, ಏಪ್ರಿಲ್) ತಿಂಗಳುಗಳ ಹುಣ್ಣಿಮೆಯಂದು ಜರಗುತ್ತದೆ. […]