ಅಲ್ಲಮಪ್ರಭು ಕುರಿತ ಅನುಸಂಧಾನಗಳು (ಆಧುನಿಕಪೂರ್ವ) (೪)
೨೭. ಮೌಖಿಕ ಸಂಪ್ರದಾಯ ಮತ್ತು ಅಲ್ಲಮ ಮೌಖಿಕ ಸಂಪ್ರದಾಯದಲ್ಲಿ ಅಲ್ಲಮನನ್ನು ಉಲ್ಲೇಖಿಸುವ ಡೊಳ್ಳಿನ ಪದಗಳಿವೆ, ಗೊರವರ ಪದಗಳಿವೆ, ಕೋಲಾಟದ ಪದಗಳಿವೆ. ಮೌಖಿಕ ಮಹಾಕವ್ಯವೂ ಉಂಟು. ಬಸವೇಸ ಚೆನ್ನಬಸವೇಶರ ಕಥೆ ಎಂಬ ಗೊಂದಲಿಗರ ಕಥನಕಾವ್ಯವೊಂದು ಇದ್ದು ಇಲ್ಲಿ ಅಲ್ಲಮ ಪ್ರಸ್ತಾಪವೂ ಇದೆ.[1] ದುಂದುಮೆ ಮೊದಲಾದ ಪದಗಳಿದ್ದು ಅಲ್ಲಮನ ಕುರಿತಾದ ದಂದುಮೆ ಪದವೂ ಇರಬಹುದು.[2] ಬಯಲಾಟಗಳನ್ನು ಅನುಸರಿಸಿಯೆ ಶರಣರನ್ನು ಕುರಿತಂತೆ ಪೌರಾಣಿಕ ನಾಟಕಗಳು ಪ್ರಚಲಿತದಲ್ಲಿವೆ. ಶರಣರ ಕುರಿತು ಸಣ್ಣಾಟ ದೊಡ್ಡಾಟಗಳನ್ನು ಶರಣರಾಟ ಎಂದೇ ಗುರ್ತಿಸುತ್ತ ಬರಲಗಿದೆ. ಅಲ್ಲಮನ ಕುರಿತಂತೆಯೂ ಸಣ್ಣಾಟವಿದೆ.[3] [...]