ವನ್ಯಜೀವಿ ಗಣತಿಯ ವಿಧಗಳು ಹಾಗೂ ಮಹತ್ವ
ವನ್ಯಜೀವಿ ಸಂರಕ್ಷಣೆಯಲ್ಲಿ ಅತಿ ಮಹತ್ವದ ವಿಷಯಗಳಲ್ಲಿ ಒಂದು ವನ್ಯಜೀವಿಗಳ ಗಣತಿ (ಸೆನ್ಸಸ್). ಗಣತಿ ಮಾನವ ಗಣತಿಯನ್ನು ಒಂದೊಂದಾಗಿ ಎಣಿಸಿ ಒಟ್ಟಾರೆ ಸಂಖ್ಯೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅನೇಕ ವಿಧಾನಗಳನ್ನು ಅನುಸರಿಸಿ ಕೊನೆಗೆ ಯುಕ್ತಗಣಿತವನ್ನು ಬಳಸಿಕೊಂಡು ವೈಜ್ಞಾನಿಕವಾದ ಒಂದು ಅಂದಾಜು ಸಂಖ್ಯೆಯನ್ನು ತಲುಪಲಾಗುವುದು. ವರ್ಷಂಪ್ರತಿ ಗಣತಿಯನ್ನು ನಡೆಸುತ್ತಾ ಬಂದಾಗ ಒಂದು ಆಧಾರ ಸಂಖ್ಯೆ ದೊರೆಯುತ್ತದೆ. ಮುಂದೆ ಆ ಜೀವಿಯ ಸಂಖ್ಯೆ ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಬಂದರೆ ಕಾರಣಗಳನ್ನು ವಿಶ್ಲೇಷಿಸಲಾಗುವುದು. ಒಂದು ಜೀವಿ ಬದುಕಿ ಉಳಿಯಲು ಎಷ್ಟು ಆಹಾರ ಬೇಕು? [...]