ರಂಗ ವಿಮರ್ಶೆಯ ಬೆನ್ನು ಹತ್ತಿ..
ರಂಗ ವಿಮರ್ಶೆ ಎನ್ನುವುದೊಂದು ಇದೆಯೇ? ರಂಗ ವಿಮರ್ಶೆ ಕಾಲ ಕಾಲಕ್ಕೆ ತನ್ನನ್ನೇ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಿದೆಯೇ? ರಂಗ ವಿಮರ್ಶೆಯನ್ನು ಮಾಡಲು ಬೇಕಾದ ಪರಿಕರಗಳೇನು?- ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ರಂಗಭೂಮಿಯಲ್ಲಿ ಒಂದು ಭಿನ್ನ ಪ್ರಯತ್ನವಾಗಿ ರೂಪುಗೊಂಡ 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ರಂಗ ವಿಮರ್ಶೆಯ ಮೇಲೆ ಕ್ಷ ಕಿರಣ ಬೀರಲಾಗಿದೆ. ‘ಮಲೆಗಳಲ್ಲಿ ಮದುಮಗಳು’ ಒಂದು ಕಾದಂಬರಿ. ಕನ್ನಡದ ಮನಸ್ಸನ್ನು ದಶಕಗಳಿಂದ ಆಳಿರುವ, ಆಳುತ್ತಿರುವ ಕಾದಂಬರಿ. ಕಿನ್ನರಿ ಜೋಗಿಗಳ ಬಗಲ ಜೋಳಿಗೆಯಿಂದ ಹಿಡಿದು ಮನೆ ಮನೆಯ ಕಪಾಟಿನಲ್ಲೂ, [...]