ಬೇಳೆಕಾಳು ಬೆಳೆಗಳು (Pulses)
i. ತೊಗರಿ
i. ಹೆಸರು
iii. ಕಡಲೆ
ಎಣ್ಣೆಕಾಳು ಬೆಳೆಗಳು
i. ಸೇಂಗಾ ಮುಂಗಾರು ಮತ್ತು ಬೇಸಿಗೆಗಳಲ್ಲಿ ಸೇಂಗಾ ಬೆಳೆಯ ಬೇಸಾಯವನ್ನು ಮಾಡುವುದು ಸಾಮಾನ್ಯ. ಉಷ್ಣತಾಮಾನವು ಕಡಿಮೆ ಇರದ ಪ್ರದೇಶಗಳಲ್ಲಿ, ಚಳಿಗಾಲದಲ್ಲಿಯೂ ಈ ಬೆಳೆಯನ್ನು ಬೆಳೆಯಲು ಸಾಧ್ಯ.
ii. ಸೂರ್ಯಕಾಂತಿ : ಸೂರ್ಯಕಾಂತಿಯನ್ನು ಮೂರು ಹಂಗಾಮುಗಳಲ್ಲಿ ಬೆಳೆಯಬಹುದು. ಮಣ್ಣಿನಲ್ಲಿ ಲಭ್ಯ ನೀರು ಶೇಕಡಾ ೫೦ರಷ್ಟು ಉಳಿದಾಗ, ನೀರನ್ನು ಪೂರೈಸಿದರೆ ಅಧಿಕ ಇಳುವರಿಯು ದೊರೆಯುತ್ತದೆ.
iii. ಕುಸುಬೆ: ಕುಸುಬೆಯು ಹಿಂಗಾರಿ ಹಂಗಾಮಿನ ಬೆಳೆ. ಮಣ್ಣಿನಲ್ಲಿ ಸಂಗ್ರಹಗೊಂಡ ಆರ್ದ್ರತಯ ಆಧಾರದ ಮೇಲೆ, ಈ ಬೆಳೆಯ ಬೇಸಾಯವನ್ನು ಮಾಡುವುದು ಸಾಮಾನ್ಯ. ಆದರೆ, ನೀರನ್ನು ಪೂರೈಸಿದರೆ ಕುಸುಬೆಯ ಅಧಿಕ ಇಳುವರಿಯನ್ನು ಪಡೆಯಬಹುದು.
ಕುಸುಬೆಗೆ ಎರಡು ಬಾರಿ ನೀರನ್ನು ಒದಗಿಸಿದರೆ ಸಾಕು. ಹೂವು ಬರುವ ಸಮಯವು (ಬಿತ್ತಿದ ೧೦೫ ದಿನಗಳ ಸಮಯವು) ಬೆಳವಣಿಗೆಯ ಅತಿ ಸೂಕ್ಷ್ಮ ಹಂತವೆಂದೂ, ಶಾಖೆಗಳು ನಿರ್ಮಾಣಗೊಳ್ಳುವ (ಬಿತ್ತಿದ ೬೫ ದಿನಗಳ) ಸಮಯವು ನಂತರದ ಸೂಕ್ಷ್ಮ ಹಂತವೆಂದೂ ಕಂಡು ಬಂದಿದೆ.
ಹತ್ತಿ : ಹತ್ತಿ ಬೆಳೆಯನ್ನು ವಿಭಿನ್ನ ವಾತಾವರಣ ಮತ್ತು ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಬಿತ್ತುವ ಸಮಯ ಮತ್ತು ಬಳಸುವ ತಳಿಗಳು ಬೇರೆ ಬೇರೆಯಾಗಿವೆ. ಆದ್ದರಿಂದ ನೀರಿನ ಅವಶ್ಯಕತೆಯಲ್ಲಿಯೂ ವಿಭಿನ್ನತೆ ಇರುವುದು ಸಹಜವೆನ್ನಬಹುದು.
ಅ) ಹೂವುಗಳನ್ನು ಧರಿಸುವ ಶಾಖೆಗಳು (Sympodial Branches) ಹೊರಬರುವ ಸಮಯ (ಬಿತ್ತಿದ ೯-೧೦ ವಾರಗಳು)
ಆ) ಹೂವುಗಳು ಅರಳುವ ಸಮಯ ೧೪ ರಿಂದ ೧೫ ವಾರಗಳು)
ಇ) ಕಾಯಿ ಕಚ್ಚುವ ಸಮಯ (೧೮ನೇ ವಾರ)
ಈ) ಕಾಯಿ ಒಡೆಯುವ ಸಮಯ (೨೧ರಿಂದ ೨೩ ವಾರಗಳು)
ಇವುಗಳಲ್ಲಿ, ಹೂವು ಅರಳುವ ಸಮಯ ಮತ್ತು ಕಾಯಿಗಳಾಗುವ ಸಮಯ ಇವೆರಡು ಹೆಚ್ಚು ಸೂಕ್ಷ್ಮ ಹಂತಗಳೆಂದು ಕಂಡುಬಂದಿದೆ. ಆ ಸಮಯಗಳಲ್ಲಿ ಬೆಳೆಗೆ ನೀರಿನ ಕೊರತೆಯಾದರೆ ಹೂವು ಮತ್ತು ಕಾಯಿಗಳು ಉದುರುತ್ತವೆ. ಕಾಯಿಗಳು ಸರಿಯಾಗಿ ಬೆಳೆಯುವುದಿಲ್ಲ. ಅರಳೆಯ ಪ್ರಮಾಣವು ಕಡಿಮೆಯಾಗಿ ಇಳುವರಿಯು ತಗ್ಗುತ್ತದೆ.
ಕಬ್ಬು: ದೇಶದಲ್ಲಿ ಬೆಳೆಯುವ ಕಬ್ಬಿನ ಪ್ರದೇಶದ ಶೇಕಡಾ ೭೦ರಷ್ಟು ನೀರಾವರಿಯಲ್ಲಿದೆ. ಉತ್ತರ ಭಾಗದಲ್ಲಿ ಕಬ್ಬನ್ನು ಫೆಬ್ರವರಿ-ಮಾರ್ಚ್‌ತಿಂಗಳುಗಳಲ್ಲಿ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನವರೆಗೆ ನೆಡುವ ರೂಢಿ ಇದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ, ಕಬ್ಬನ್ನು ಮೂರು ಹಂಗಾಮುಗಳಲ್ಲಿ ಅಂದರೆ ಡಿಸೆಂಬರ್‌ದಿಂದ ಫೆಬ್ರವರೆಗೆ (೧೨ ತಿಂಗಳು ಅವಧಿಯ ಕಬ್ಬು), ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ (೧೫ ತಿಂಗಳೂ ಅವಧಿಯ ಕಬ್ಬು) ಮತ್ತು ಜುಲೈ-ಆಗಸ್ಟ್ ತಿಂಗಳುಗಳಲ್ಲಿ (೧೮ ತಿಂಗಳು ಅವಧಿಯ ಕಬ್ಬು) ನೆಡುವ ರೂಢಿ ಇದೆ.
ಮಣ್ಣಿನ ಗುಣಧರ್ಮ, ಹವಾಮಾನ, ಬೇಸಾಯದ ಪದ್ದತಿ ಇತ್ಯಾದಿಗಳ ಮೇಲಿಂದ ನೀರಾವರಿ ಜಲದ ಪೂರೈಕೆಯಲ್ಲಿ ವಿಭಿನ್ನತೆಯಿದೆ. ಕೆಳಗಿನ ಸಂಗತಿಗಳನ್ನು ಗಮನಿಸಬಹುದು.
ದೆಹಲಿ : ಮಳೆಗಾಲವು ಆರಂಭವಾಗುವ ಮೊದಲು ೫ ಬಾರಿ ನೀರನ್ನು ಮತ್ತು ಮಳೆಗಾಲದ ನಂತರ ಒಂದೆರಡು ಬಾರಿ ನೀರನ್ನು ಒದಗಿಸಬೇಕು.
ಪಂಜಾಬ್: ಹತ್ತು ದಿನಗಳ ಅಂತರದಲ್ಲಿ ೮ ಬಾರಿ ನೀರನ್ನು ಮತ್ತು ನೀರಿನ ಒಟ್ಟು ಪ್ರಮಾಣ ೧೭೦೦ ರಿಂದ ೧೮೦೦ ಮಿ.ಮೀ.
ಬಿಹಾರ: ಹದಿನೆಂಟು ದಿನಗಳ ಅಂತರದಲ್ಲಿ ೬ ರಿಂದ ೭ ಬಾರಿ ನೀರನ್ನು ಕೊಡಬೇಕು. ನೀರಿನ ಒಟ್ಟು ಪ್ರಮಾಣ ೧೪೦೦ ರಿಂದ ೧೫೦೦ ಮಿ.ಮೀ.
ಮಹಾರಾಷ್ಟ್ರ : ಮಳೆಗಾಲವು ಆರಂಭವಾಗುವವರೆಗೆ ೧೦ ದಿನಗಳ ಅಂತರದಲ್ಲಿ, ಬೇಸಿಗೆ ಕಾಲದಲ್ಲಿ ೮ ದಿನಗಳ ಅಂತರದಲ್ಲಿ ಮತ್ತು ಇತರ ಸಮಯದಲ್ಲಿ ೧೨ ದಿನಗಳ ಅಂತರದಲ್ಲಿ ನೀರನ್ನು ಪೂರೈಸಬೇಕು. ಬೇಕಾಗುವ ನೀರಿನ ಒಟ್ಟು ಪ್ರಮಾಣ ೨೮೦೦ ರಿಂದ ೩೦೦೦ ಮಿ.ಮೀ. ಅಡಸಾಲಿ ಬೆಳೆಗೆ (೧೮ ತಿಂಗಳ ಬೆಳೆಗೆ) ೩೨೦೦ ರಿಂದ ೩೫೦೦ ಮಿ.ಮೀ. ನೀರು ಬೇಕಾಗುತ್ತದೆ.
ಕರ್ನಾಟಕ: ಒಂದು ವರ್ಷದಲ್ಲಿ ೨೮ ಬಾರಿ ನೀರನ್ನೊದಗಿಬೇಕಾಗುತ್ತದೆ ಎಂದೂ, ೨೪೦೦ ಮಿ.ಮೀ. ನೀರು ಬೇಕೆಂದೂ ಅರಭಾವಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದಿದೆ.
ಆಂಧ್ರಪ್ರದೇಶ : ರಾಜ್ಯದ ಉತ್ತರ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಕೇವಲ ೨ ಬಾರಿ ಪೂರೈಸಿದ ನೀರು ಸಾಕಾದರೆ, ದಕ್ಷಿಣದ ಜಿಲ್ಲೆಗಳಲ್ಲಿ ೨೨ ರಿಂದ ೨೫ ಬಾರಿ ನೀರನ್ನು ಪೂರೈಸಬೇಕಾಗುತ್ತದೆ. ವರ್ಷದಲ್ಲಿ ಬೇಕಾಗುವ ಒಟ್ಟು ನೀರಿನ ಪ್ರಮಾಣವು ೧೬೦೦ ರಿಂದ ೧೭೦೦ ಮಿ.ಮೀ.
ತಮಿಳುನಾಡು: ಕಬ್ಬಿಗೆ ಪ್ರತಿ ೬,೧೨ ಮತ್ತು ೧೮ ದಿನಗಳಿಗೊಮ್ಮೆ ನೀರನ್ನು ಪೂರೈಸಿದಾಗ ಕಬ್ಬಿನ ಇಳುವರಿಯಲ್ಲಿ ಗಣನೀಯ ಅಂತರವಾಗುವುದಿಲ್ಲವೆಂದು ಪ್ರಯೋಗಗಳಿಂದ ತಿಳಿದು ಬಂದಿದೆ. ಆದರೆ, ಪ್ರತಿ ೬ ದಿನಗಳಿಗೊಮ್ಮೆ ನೀರನ್ನು ಪೂರೈಸಿದಾಗ ಕಬ್ಬಿನ ರಸದ ಗುಣಮಟ್ಟವು ಉತ್ತಮಗೊಳ್ಳುವುದೆಂದು ಕಂಡು ಬಂದಿದೆ.
ತಂಬಾಕು : ಸಿಗರೇಟ್, ಬೀಡಿ, ಹುಕ್ಕಾ ಮುಂತಾದವುಗಳಲ್ಲಿ ಬಳಸಲು ಮತ್ತು ಜಗಿ (ಅಗಿ)ಯಲು ತಂಬಾಕನ್ನು ಬೆಳೆಯಲಾಗುತ್ತದೆ.
ನೀರಾವರಿ ಜಲದ ಸಂಯುಕ್ತ ಬಳಕೆ (Conjunctive use of Irrigatin water): ದೇಶದಲ್ಲಿರುವ ಹಲವು ನಾಲೆಗಳಿಂದ ಪೂರೈಕೆಯಾಗುತ್ತಿರುವ ನೀರಾವರಿಗೆ ಒಂದಲ್ಲ ಒಂದು ಮಿತಿಯಿರುವುದೇ ಸಾಮಾನ್ಯ. ಉದಾಹರಣೆಗೆ ಕೆಳಗಿನ ಸಂಗತಿಗಳನ್ನು ಗಮನಿಸಬಹುದು.
ಮೇಲೆ ಸೂಚಿಸಿದ ಸಂದರ್ಭಗಳಲ್ಲಿ, ಬೆಳೆಯು ನಷ್ಟವಾಗದಂತೆ ಮಾಡಲು ಇಲ್ಲವೇ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಲು, ಅಂತರ್ಜಲದ ಬಳಕೆಯನ್ನು ಸಾಧ್ಯವಿರುವಲ್ಲೆಲ್ಲ ಮಾಡಿಕೊಳ್ಳುವುದು ಜಾಣತನವೆನಿಸೀತು. ಒದಕ್ಕಿಂತ ಅಧಿಕ ಜಲ ಮೂಲಗಳಿಂದ ದೊರೆಯುವ ನೀರನ್ನು ಒಂದಕ್ಕೊಂದು ಪೂರಕವಾಗುವಂತೆ ಕೃಷಿಯಲ್ಲಿ ಬಳಸಿಕೊಳ್ಳುವ ಕಾರ್ಯ ವಿಧಾನಕ್ಕೆ ಜಲದ ಸಂಯುಕ್ತ ಬಳಕೆ ಎನ್ನಬಹುದು.
ನೀರಿನ ಸಂಯುಕ್ತ ಬಳಕೆಯು, ಭಾರತದ ಕೆಲವೆಡೆ ಕಾರ್ಯರೂಪದಲ್ಲಿದೆ. ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದಲ್ಲಿ, ಮಹಾರಾಷ್ಟ್ರದ ಗೋದಾವರಿ ಮತ್ತು ಪ್ರವರಾ ನದಿಗಳ ನಾಲೆ ಪ್ರದೇಶದಲ್ಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ನಾಲೆಯ ಹಾಗೂ ಬಾವಿಯ ನೀರಿನ ಸಂಯುಕ್ತ ಬಳಕೆಯಾಗುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಇದಲ್ಲದೇ, ಹರಿಯಾಣ ರಾಜ್ಯದಲ್ಲಿ ಯಮುನಾ ನದಿಯ ಪಶ್ಚಿಮ ನಾಲೆವರೆಗೆ, ಹಲವಾರು ಕೊಳವೆ ಬಾವಿಗಳನ್ನು ನಿರ್ಮಿಸಿ, ಅವುಗಳಿಂದ ದೊರೆತ ನೀರನ್ನು ನಾಲೆಯಲ್ಲಿ ನೀರು ಇಲ್ಲದಿರುವಾಗ ಉಪಯೋಗಿಸಿ, ಬೆಳೆಯ ಉತ್ಪಾದನೆಯು ಆಗುತ್ತಿರುವ ಸಂಗತಿ ಗಮನಾರ್ಹ. ಈ ಕ್ರಮದಿಂದ ಭೂಮಿಯು ಜೌಗಾಗುವುದೂ ತಪ್ಪುತ್ತದೆಂಬುದು ಮಹತ್ವದ ವಿಷಯ.
ಮೇಲೆ ವಿವರಿಸಿದ ಸಂದರ್ಭಗಳಲ್ಲೇ ಅಲ್ಲದೇ ಇನ್ನೂ ಕೆಲವು ಪ್ರಸಂಗಗಳಲ್ಲಿ, ಜಲದ ಸಂಯುಕ್ತ ಬಳಕೆಯು ಪ್ರಯೋಜನಕಾರಿ ಎನ್ನಬಹುದು. ಉದಾಹರಣೆಗೆ
ನಿರ್ದಿಷ್ಟ ಭೂ ಪ್ರದೇಶಕ್ಕೆ ನೀರನ್ನು ಪೂರೈಸಲು ಬೇಕಾಗುವ ಸಮಯ
ಒಂದು ಭೂ ಪ್ರದೇಶಕ್ಕೆ ನೀರಾವರಿಯ ಜಲವನ್ನು ಪೂರೈಸಲು ಬೇಕಾಗುವ ಸಮಯವು ಕೆಳಗಿನ ಸಂಗತಿಗಳನ್ನು ಅವಲಂಭಿಸಿದೆ.
i. ಪ್ರತಿ ಸೆಕೆಂಡಿಗೆ ಹರಿದು ಬರುವ ನೀರಿನ ಪ್ರಮಾಣ: ನೀರು ಹರಿದು ಬರುವ ವೇಗವು ಕಡಿಮೆ ಇದ್ದರೆ ನೀರಾವರಿಯನ್ನು ಮುಗಿಸಲು ಅಧಿಕ ಸಮಯವು ಬೇಕಾಗುತ್ತದೆ.
ii. ಪೂರೈಸಬೇಕೆಂದಿರುವ ನೀರಿನ ಪ್ರಮಾಣ: ಹೆಚ್ಚು ಆಳದವರೆಗೆ ನೀರನ್ನು ಪೂರೈಸಲು ಹೆಚ್ಚು ಸಮಯವು ಬೇಕು.
iii. ಬಳಕೆಯಾಗುವ ಶೇಕಡಾ ನೀರಿನ ಪ್ರಮಾಣ : ಸಮರ್ಥ ಬಳಕೆಯಾಗುವಲ್ಲಿ ನೀರಾವರಿಯನ್ನು ಪೂರೈಸಲು ಹೆಚ್ಚು ಸಮಯವು ಬೇಕಾಗುವುದು ಸಹಜ.
iv. ನೀರನ್ನು ಪೂರೈಸಬೇಕೆಂದಿರುವ ಭೂ ಪ್ರದೇಶ : ಭೂ ಪ್ರದೇಶವು ದೊಡ್ಡದಿದ್ದಷ್ಟು ನೀರನ್ನು ಪೂರೈಸಲು ಹೆಚ್ಚು ಸಮಯವು ಬೇಕಾಗುವುದು ಸಹಜ.
ನಿರ್ದಿಷ್ಟ ಪ್ರದೇಶಕ್ಕೆ ನೀರನ್ನು ಪೂರೈಸಲು ಬೇಕಾಗುವ ಸಮಯವನ್ನು ಲೆಕ್ಕ ಮಾಡುವ ವಿಧಾನವನ್ನು ಕೆಳಗಿನ ಉದಾಹರಣೆಯಿಂದ ತಿಳಿಯಬಹುದು.
ತಿಳಿದಿರುವ ವಿವರಗಳು
ಕಂಡು ಹಿಡಿಯಬೇಕಾದದ್ದು
ನೀರಿನ ಕೊರತೆಯನ್ನು ನಿವಾರಿಸಿ ಮಣ್ಣನ್ನು ಜಲಧಾರಣಾ ಶಕ್ತಿಗೆ ತರಲು ಬೇಕಾಗುವ ಸಮಯವನ್ನು (ದಿನಗಳನ್ನು ಲೆಕ್ಕ ಮಾಡಲು), ಕೆಳಗಿನ ಸಮೀಕರಣವನ್ನು ಉಪಯೋಗಿಸಬೇಕು.
|
ಭೂ ಪ್ರದೇಶದವರೆಗೆ ಬಂದು ಮುಟ್ಟುವ ನೀರಿನ ಪ್ರಮಾಣ |
x |
ಹರಿದು ಬರು ತ್ತಿರುವ ನೀರಿನ ಪ್ರಮಾಣ (ಘನ ಸೆಂ.ಮೀ ಸೆಕೆಂಡಿಗೆ) |
x |
ಬೇಕಾಗುವ ಸಮಯ (ದಿನಗಳಲ್ಲಿ) |
= |
ನೀರನ್ನು ಪೂರೈಸ ಬೇಕೆಂದಿರುವ ಪ್ರದೇಶ (ಹೆಕ್ಟೇರುಗಳಲ್ಲಿ) |
x |
ಮಣ್ಣಿನಲ್ಲಿ ಇರುವ ನೀರಿನ ಕೊರತೆ (ಸೆಂ.ಮೀ.) |
ಮೇಲೆ ಕೊಟ್ಟಿರುವ ಅಂಕೆಗಳನ್ನು ಈ ಸಮೀಕರಣದಲ್ಲಿ ಅಳವಡಿಸಿದಾಗ
೦.೮ x ೨ x ಸಮಯ = ೩ x ೫
ಸಮಯ = ೩ x ೫ / ೦.೮ x ೨
೧೫ / ೧.೬ = ೯.೪ ದಿನಗಳು
ನೀರಾವರಿ ಯೋಜನೆಯನ್ನು ಸಿದ್ದಪಡಿಸಲು ಇಂಥ ಮಾಹಿತಿಯು ಪ್ರಯೋಜನಕಾರಿ ಎನ್ನಬಹುದು.