ಗುಡ್ಡ ಹಾಗೂ ಎತ್ತರ ಪ್ರದೇಶಗಳಲ್ಲಿ ಅತ್ಯಾಧುನಿಕ ಸಾಮಾಗ್ರಿಗಳನ್ನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಕಂಪನಿಗಳು, ಆಣೇಕಟ್ಟುಗಳು ವಿದ್ಯುತ್ ಉತ್ಪಾದಿಸುತ್ತವೆ. ಆದಾಗ್ಯೂ ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ವಿದ್ಯುತ್ ಸಚಿವ ಕೆ.ಎಸ್.ಈಶ್ವರಪ್ಪ ಅಂತೂ ಮಳೆಯಾಗದಿದ್ದರೆ ದೇವರೇಗತಿ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಬಳಕೆದಾರರಿಗೆ ಸಮರ್ಪಕ ವಿದ್ಯುತ್ ಒದಗಿಸುವುದು ದುಸ್ಸಾಹಸದ ಮಾತೆ ಸರಿ.
ಈ ಕಾರಣದಿಂದಲೇ ಸಾಯಂಕಾಲ ಹಾಗೂ ಬೆಳಗಿನ ಸಮಯದಲ್ಲಿ ಪವರ್‌ಗೆ ಲೋಡ್‌ಶೆಡ್ಡಿಂಗ್ ಮಾಡಲು ಪೀಕ್ ಅವರ್ ಇದ್ದ ಹಾಗೆ. ಇಂತಹ ಸಮಯದಲ್ಲಿ ಅದು [...]